ಫೆ. 10ರಂದು ಆವರಗೊಳ್ಳ ಜಾತ್ರೆ

ಆವರಗೊಳ್ಳ ಜಾತ್ರೆ
ದಾವಣಗೆರೆ: ತಾಲ್ಲೂಕಿನ ಆವರಗೊಳ್ಳ ಗ್ರಾಮದ ಶ್ರೀ ವೀರಭದ್ರೇಶ್ವರ ಮಹಾಸ್ವಾಮಿ ರಥೋತ್ಸವವು ಇದೇ ಫೆ.10ರಂದು ಶುಕ್ರವಾರ ಸಂಜೆ 6 ಗಂಟೆಗೆ ಜರುಗಲಿದೆ
ದಿ.5ರ ಭಾನುವಾರದಿಂದ ದಿ.13ರ ಸೋಮವಾರದವರೆಗೆ ವಿವಿಧ ವಾಹನಗಳ ಉತ್ಸವಾದಿಗಳು ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆಯಲಿವೆ.
ದಿ.10ರಂದು ಬೆಳಿಗ್ಗೆ 8ಕ್ಕೆ ಗಜಾರೋಹಣ ಉತ್ಸವ ಹಾಗೂ ಸಂಜೆ 6ಕ್ಕೆ ಮಹಾರಥೋತ್ಸವ ನಡೆಯಲಿದೆ. ದ ಗಂಗಾಪೂಜೆ, ವೀರಗಾಸೆ ಸೇವೆಗಳು ನಡೆಯಲಿವೆ.
ಶ್ರೀ ವೀರಭದ್ರೇಶ್ವರ ಮಹಾಸ್ವಾಮಿ ಸೇವಾ ಸಂಘದ ಅಧ್ಯಕ್ಷ ಬಿ.ಎಂ. ಷಣ್ಮುಖಯ್ಯ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ರಥೋತ್ಸವದ ಮಾಹಿತಿ ನೀಡಿದಆವರಗೊಳ್ಳ ಜಾತ್ರೆರು. ಸಂಘದ ಕಾರ್ಯದರ್ಶಿ ವಿ.ವೀರಯ್ಯ, ಖಜಾಂಚಿ ಡಿ.ವೀರಯ್ಯ, ನಿರ್ದೇಶಕ ಸಿದ್ದಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.