ಸ್ತ್ರೀ ‘ಶಕ್ತಿ’ : ಹೆಣ್ಮಕ್ಕ್ಳೆ ಸ್ಟ್ರಾಂಗು ಗುರು !

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ’ಸ್ರ್ತೀಶಕ್ತಿ’ ಯೋಜನೆ ಜಾರಿಯಾಗಿದ್ದು ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣದ ಭಾಗ್ಯ ಲಭಿಸಿದೆ. ಈ ಯೋಜನೆಯಿಂದಾಗಿ ಮಹಿಳಾ ಪ್ರಯಾಣಿಕರ ಸಂಖ್ಯೆಯೂ ಮಿತಿಮೀರಿದೆ.
ಬಹುತೇಕ ಸಾರಿಗೆ ಬಸ್ಸುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದು ರಾಜ್ಯದ ಪುಣ್ಯಕ್ಷೇತ್ರಗಳಲ್ಲೂ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಪ್ರಮುಖ ಬಸ್ ನಿಲ್ದಾಣಗಳೂ ಪ್ರಯಾಣಿಕರ ನೂಕುನುಗ್ಗಲಿನ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತಿದೆ.
ಇದೇನು ಮದುವೆ ಕರೆಸಿಕೊಂಡ ಜನ ಅಲ್ಲ ರೀ
ಹುಕ್ಕೇರಿ ಬಸ್ ಸ್ಟ್ಯಾಂಡ್ .!🙆 pic.twitter.com/Cia6YwmCzF— Namo Mahantesh Maganur 🇮🇳🚩 (@MahanteshMagan2) June 18, 2023
ಈ ನಡುವೆ,ಉಚಿತ ಬಸ್ ಪ್ರಯಾಣದ ಸೌಲಭ್ಯವು ಹಲವಾರು ಅವಾಂತರಗಳಿಗೆ ಸಾಕ್ಷಿಯಾಗುತ್ತಿದೆ. ಫ್ರಿ ಪ್ರಯಾಣ ಹಿನ್ನೆಲೆ ಬಸ್ ಹತ್ತಲು ನೂಕು ನುಗ್ಗಲು ಉಂಟಾಗಿ, ಎಳೆದಾಟದಲ್ಲಿ ಕೆಎಸ್ಸಾರ್ಟಿಸಿ ಬಸ್ನ ಬಾಗಿಲು ಮುರಿದುಬಿದ್ದ ಘಟನೆ ಮಂಡ್ಯ ಬಳಿ ನಡೆದಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ.
ಅವಸ್ಥೆ ನೋಡಿ !🙂
ಮೈಸೂರು ಬಸ್ ಸ್ಟ್ಯಾಂಡಂತೆ 🙄😁 pic.twitter.com/YG47eHHpCg— RAVI N DEVADIGA (@RAVINDEVADIGA1) June 18, 2023
ಕೊಳ್ಳೆಗಾಲದ ಬಸ್ ನಿಲ್ದಾಣದಲ್ಲಿ ಜನರ ನೂಕಾಟಕ್ಕೆ ಸಾರಿಗೆ ಸಂಸ್ಥೆ ಬಸ್ನ ಬಾಗಿಲು ಕಿತ್ತು ಬಂದ ಘಟನೆ ಬೆನ್ನಲ್ಲೇ, ಮಳವಳ್ಳಿಯಲ್ಲೂ ಘಟನೆ ಮರುಕಳಿಸಿದೆ.