ಜ್ವರ, ಹಲ್ಲು ನೊವಿಗೆ ಇಲ್ಲಿದೆ ಮನೆಮದ್ದು: ಶೀಘ್ರ ಗುಣಮುಖ
ಜ್ವರಕ್ಕೆ ಮನೆಮದ್ದು
ಜ್ವರ ಬಂದರೆ ಆಸ್ಪತ್ರೆಗೆ ಹೋಗಲು ಜನರು ಹಿಂದೇಟು ಹಾಕುತ್ತಿದ್ದರು. ಆದರೆ ಜ್ವರ ಬಂದರೆ ನಿರ್ಲಕ್ಷ್ಯ ಮಾಡದೆ ವೈದ್ಯರಿಗೆ ತೋರಿಸಬೇಕು. ಇನ್ನು ಔಷಧಿ ಜೊತೆಗೆ ಸಾಕಷ್ಟು ನೀರು ಕುಡಿಯುವುದು, ಸೂಪ್ ಕುಡಿಯುವುದು, ಗಂಜಿ ಸೇವನೆ ಇವೆಲ್ಲಾ ಬೇಗನೆ ಚೇತರಿಸಿಕೊಳ್ಳಲು ಸಹಕಾರಿ.
ಹಲ್ಲುನೊವಿಗೆ ಮದ್ದು
ಕೊರೊನಾ ಸಮಯದಲ್ಲಿ ಹಲ್ಲು ನೋವು ಬಂದಾಗ ಇತ್ತ ಆಸ್ಪತ್ರೆಗೆ ಹೋಗಲಾರದೆ, ಸೂಕ್ತ ಔಷಧಿ ಯಾವುದೆಂದು ತಿಳಿಯದೆ ತುಂಬಾ ಜನ ಬಳಲಿದ್ದಾರೆ, ತುಂಬಾ ಹಲ್ಲು ನೋವು ಇದ್ದರೆ ದಂತ ವೈದ್ಯರಿಗೆ ತೋರಿಸಬೇಕು. ಚಿಕ್ಕ-ಪುಟ್ಟ ನೋವಿಗೆ ಲವಂಗ, ಸಿಬೆ ಎಲೆ, ವೆನಿಲ್ಲಾ ರಸ, ಪೆಪ್ಪರ್‌ಮಿಂಟ್ ಟೀ ಬ್ಯಾಗ್, ಕೋಲ್ಡ್ ಕಂಪ್ರಸ್, ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು ಇವೆಲ್ಲಾ ನೋವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಸಹಕಾರಿ.