ಶಾಲಾ ದಾಖಲಾತಿ ಅರ್ಜಿ ಫಾರಂಗೆ ಐವತ್ತು ರೂಪಾಯಿ.? ಬಿಲ್ ಕೊಡಲ್ವಂತೆ.! ಖಾಲಿಯಾಗ್ತಿದೆ ಪೋಷಕರ ಜೇಬು.
ದಾವಣಗೆರೆ : ನಗರದಲ್ಲಿರುವ ಖಾಸಗಿ ಶಾಲೆಗಳು ಪೋಷಕರನ್ನು ಸುಲಿಗೆ ಮಾಡುತ್ತಿದ್ದು, ಕಾನೂನು ನಿಯಮಗಳನ್ನು ಪಾಲಿಸುತ್ತಿಲ್ಲ.
ಇದಕ್ಕೆ ಸಾಕ್ಷಿಯಾಗಿ, ಹಲವು ಶಾಲೆಗಳಿವೆ. ಈ ಬಗ್ಗೆ ಪೋಷಕರು ಡಿಡಿಪಿಐಗೆ ದೂರು ನೀಡಲು ಮುಂದಾಗಿದ್ದಾರೆ. ಶಾಲೆಗಳಿಗೆ ದಾಖಲು ಮಾಡಲು ಎಲ್ ಕೆಜಿ ಮಗುವಿಗೆ ಇಪ್ಪತ್ತೈದು ಸಾವಿರ ಕೇಳಿದ್ದು, ಒಂದು ರೂಪಾಯಿ ಕೂಡ ಕಡಿಮೆ ಮಾಡೋದಿಲ್ಲ..ಆದರೆ ಕಾನೂನು ಮಾತ್ರ ಪಾಲಿಸೋದಿಲ್ಲ..
ಮಗು ದಾಖಲು ಮಾಡಲು ಆ್ಯಡ್ಮಿಷನ್ ಗೆ ಫಾರಂ ನೀಡುತ್ತಿದ್ದು, ಫಾರಂ ಕೊಟ್ಟಿರುವ ಬಗ್ಗೆ ಈ ಶಾಲೆಯಲ್ಲಿ ಪೋಷಕರಿಗೆ ಬಿಲ್ ಕೊಡೋದಿಲ್ಲ. ಕೇಳಿದರೆ ಐವತ್ತು ರೂಪಾಯಿಗೆ ಬಿಲ್ ಯಾರು ಕೊಡೋದಿಲ್ಲ. ನಿಮಗೆ ಬೇಕಾದ್ರೆ ಕೊಡುತ್ತೇನೆ ಎನ್ನುವ ದರ್ಪದ ಮಾತುಗಳನ್ನಾಡುತ್ತಾರೆ. ಒಂದು ಮಗುವಿಗೆ ಐವತ್ತು ರೂಪಾಯಿ ಆದ್ರೆ ಎರಡು ಸಾವಿರ ಮಕ್ಕಳಿಗೆ ಹತ್ತು ಲಕ್ಷ ರೂಪಾಯಿಗಳು ಆಗಲಿದ್ದು, ಆದಾಯ ತೆರಿಗೆ ಇಲಾಖೆ ಈ ಬಗ್ಗೆ ಗಮನಹರಿಸಬೇಕಿದೆ.
ಅವರಿಗೆ ಕೇವಲ ಐವತ್ತು ರೂಪಾಯಿ, ಆದ್ರೆ ನಮಗೆ ಇದೇ ದೊಡ್ಡದು. ಕಾನೂನು ಪ್ರಕಾರ ಪ್ರತಿಯೊಂದಕ್ಕೂ ಬಿಲ್ ಕೊಡಬೇಕು. ಆದ್ರೆ ಇಲ್ಲಿ ಮಾತ್ರ ಬಿಲ್ ಕೊಡೋದೇ ವ್ಯವಹಾರ ನಡೆಯುತ್ತಿದೆ… ಇನ್ನು ಆ್ಯಡ್ಮಿಷನ್ ಮಾಡಿದಾಗಲೂ ಪ್ರೀಂಟ್ ಕಾಫಿ ಕೊಡುತ್ತಾರೆ ಎನ್ನುತ್ತಾರೆ ಪೋಷಕರು.
ಶಿಕ್ಷಣ ಇಲಾಖೆ ನಿಯಮದ ಪ್ರಕಾರ ಆ್ಯಡ್ಮಿಷನ್ ಗೆ ನೀಡುವ ಫಾರಂಗೆ ಹಣ ತೆಗೆದುಕೊಳ್ಳುವ ಹಾಗೇ ಇಲ್ಲ.. ಅಲ್ಲದೇ ಫೀಸ್ ನ್ನು ಕಾಣುವಂತೆ ಹಾಕಬೇಕು.. ಆದರೆ ಇವ್ಯಾವು ಇಲ್ಲಿಲ್ಲ.. ಇನ್ನು ಸಾವಿರಾರು ಮಕ್ಕಳಿದ್ದು ಫೈರ್ ಎಕ್ಸಿಟೇಂಶನ್ ಇರಬೇಕು. ಆದರೆ ಆ ನಿಯಮವೂ ಇಲ್ಲಿ ಪಾಲನೆ ಇಲ್ಲ.. ಈ ಬಗ್ಗೆ ಅಗ್ನಿ ಶಾಮಕ ಅಧಿಕಾರಿಗಳು ಕೂಡ ಗಮನಹರಿಸುತ್ತಿಲ್ಲ… ಇನ್ನು ಕಟ್ಟಡದ ಅವಧಿ ಬಗ್ಗೆ ಪಿಡಬ್ಲ್ಯೂ ಡಿ ಇಲಾಖೆಯಿಂದ ಪರ್ಮಿಷನ್ ತೆಗೆದುಕೊಳ್ಳಬೇಕಿದೆ ಆ ನಿಯಮದ ಬಗ್ಗೆ ಗಮನಹರಿಸಬೇಕಿದೆ.
ಇದು ಒಂದೇ ಶಾಲೆ ಕತೆಯಲ್ಲ ದಾವಣಗೆರೆಯಲ್ಲಿನ ಅನೇಕ ಶಾಲೆಗಳ ಕಥೆ. ಇನ್ನಾದರೂ ಅಧಿಕಾರಿಗಳು ಈ ಬಗ್ಗೆ ಗಮನಹರಿಸುತ್ತಾರಾ ಎಂದು ಕಾದು ನೋಡಬೇಕಿದೆ.
ಬಿಇಒ, ಫೈರ್ ಅಧಿಕಾರಿಗಳು ಸೈಲೈಂಟ್ :
ಈ ಶಾಲೆಯಲ್ಲಿ ಫೈರ್ ಸೇಫ್ಟಿ ಅಳವಡಿಸದೇ ಹೋದ್ರು ಫೈರ್ ಸೇಫ್ಟಿ ಬಗ್ಗೆ ಅಗ್ನಿ ಶಾಮಕ ಇಲಾಖಾಧಿಕಾರಿಗಳು ಎನ್ ಒ ಸಿ ನೀಡಿದ್ದಾರೆ. ಇನ್ನು ಬಿಇಒ ಹೆಚ್ಚಿನ ಶುಲ್ಕ ತೆಗೆದುಕೊಳ್ಳುತ್ತಿರುವ ಬಗ್ಗೆ ಕ್ರಮವಹಿಸುತ್ತಿಲ್ಲ….ಇವೆಲ್ಲವುಗಳನ್ನು ನೋಡಿದರೆ ಅಧಿಕಾರಿಗಳು ಶಾಮೀಲು ಆಗಿದ್ದಾರೆ ಎಂಬ ಅನುಮಾನ ಶುರುವಾಗಿದೆ.
ಈ ಬಗ್ಗೆ ಬಿಇಒ ಗಮನಹರಿಸಲು ಹೇಳುತ್ತೇನೆ, ಖಾಸಗಿ ಶಾಲೆಗೆ ಖುದ್ದಾಗಿ ಹೇಳುತ್ತೇನೆ.
–ತಿಪ್ಪೇಶಪ್ಪ, ಡಿಡಿಪಿಐ