ಯುವತಿಯ ಸಾವು ಪ್ರಕರಣದಲ್ಲಿ ಮಾಜಿ ಪಾಲಿಕೆ ಸದಸ್ಯನ ವಿರುದ್ಧ FIR ದಾಖಲು: ಪೊಲೀಸರಿಂದ ಅರೆಸ್ಟ್
ತುಮಕೂರು: ಯುವತಿಯ ಜೊತೆಗೆ ಲೈಂಗಿಕ ಸಂಪರ್ಕ ಬೆಳೆಸಿ, ಆಕೆಯನ್ನು ಗರ್ಭವತಿ ಮಾಡಿದ್ದಲ್ಲದೇ, ಗರ್ಭಪಾತಕ್ಕಾಗಿ ಮಾತ್ರೆ ನುಂಗಿಸಿದ್ದರಿಂದ ಅಡ್ಡಪರಿಣಾಮ ಬೀರಿ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಪ್ರಕರಣದಲ್ಲಿ, ಮಾಜಿ ಪಾಲಿಕೆ ಸದಸ್ಯನನ್ನು ಬಂಧಿಸಲಾಗದೆ. ತುಮಕೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ರಾಜೇಂದ್ರ ಕುಮಾರ್ ಎಂಬುವರು ಪೊಲೀಸರಿಂದ ಬಂಧನಕ್ಕೆ ಒಳಗಾದಂತವರಾಗಿದ್ದಾರೆ. ಇವರು ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ. ಈ ಪರಿಣಾಮ ಗರ್ಭವತಿಯಾಗಿದ್ದರು. ಆದ್ರೇ ಯುವತಿಗೆ ಗರ್ಭಪಾತಕ್ಕಾಗಿ ಮಾತ್ರೆ ನುಂಗಿಸಿದ್ದ ಪರಿಣಾಮ, ಅದು ಅಡ್ಡಪರಿಣಾಮ ಕೂಡ ಬೀರಿತ್ತು. ಈ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಂತ ಆಕೆ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಈ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಯುವತಿಯ ಮೊಬೈಲ್ ನಲ್ಲಿನ ಮಾಹಿತಿ ಆಧರಿಸಿ FIR ದಾಖಲಿಸಿಕೊಂಡಂತ ತುಮಕೂರು ಟೌನ್ ಠಾಣೆ ಪೊಲೀಸರು, ಈಗ ರಾಜೇಂದ್ರ ಕುಮಾರ್ ನನ್ನು ಬಂಧಿಸಿದ್ದಾರೆ.