ಇಬ್ಬರು ಪತ್ರಕರ್ತರು ಸೇರಿದಂತೆ ಐವರ ಬಂಧನ.! ನಿವೃತ್ತ ಡಿಜಿಪಿಯನ್ನೇ ಬ್ಲಾಕ್ ಮೇಲ್ ಮಾಡ ಹೊರಟಿದ್ದ ಪತ್ರಕರ್ತರು.!

ನಿವೃತ್ತ ಡಿಜಿಪಿಯನ್ನೇ ಬ್ಲಾಕ್

ಅಹಮದಾಬಾದ್‌: ಇಬ್ಬರು ಪತ್ರಕರ್ತರು, ಓರ್ವ ಸ್ಥಳೀಯ ರಾಜಕಾರಣಿ ಸೇರಿದಂತೆ ಐವರನ್ನು ಇಲ್ಲಿನ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದೆ.
ನಿವೃತ್ತ ಪೊಲೀಸ್ ಮಹಾನಿರ್ದೇಶಕರನ್ನೇ ಅತ್ಯಾಚಾರ ಪ್ರಕರಣವೊಂದರಲ್ಲಿ ಸಿಲುಕಿಸಿ, ಬ್ಲಾಕ್ ಮೇಲೇ ಮಾಡಲು ಹೊರಟ ಆರೋಪದ ಮೇಲೆ ಸೋಮವಾರ ಈ ಐವರನ್ನು ಎಇಎಸ್‌ ಅಧಿಕಾರಿಗಳು ಬಂಧಿಸಿದ್ದಾರೆ.

ಗಾಂಧಿನಗರದ ನಿವಾಸಿಗಳಾದ ಅಶುತೋಷ್ ಪಾಂಡ್ಯ ಮತ್ತು ಕಾರ್ತಿಕ್ ಜಾನಿ ಬಂಧಿತ ಪತ್ರಕರ್ತರುರ ಇವರೊಟ್ಟಿಗೆ ಗಾಂಧಿನಗರ ನಿವಾಸಿ ಜಿ.ಕೆ.ಪ್ರಜಾಪತಿ ಅಲಿಯಾಸ್ ಜಿ.ಕೆ.ದಾದಾ, ಪ್ರಜಾಪತಿಯೊಂದಿಗೆ ನಿಕಟವರ್ತಿಗಳಾದ ಗಾಂಧಿನಗರ ನಿವಾಸಿ ಮಹೇಂದ್ರ ಪರ್ಮಾರ್ ಅಲಿಯಾಸ್ ರಾಜು ಜೆಮಿನಿ, ಸೂರತ್ ನಿವಾಸಿ ಹರ್ಷ್ ಜಾಧವ್ ಎಂಬುವವರನ್ನು ಬಂಧಿಸಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಇತರ ನಾಲ್ವರು ಆರೋಪಿಗಳೊಂದಿಗೆ ಸೇರಿಕೊಂಡು ಪ್ರಜಾಪತಿ ಅವರು ಸಂತ್ರಸ್ತೆಯ ಅಫಿಡವಿಟ್‌ನಲ್ಲಿ ಮಾಜಿ ಡಿಜಿಪಿ ಹೆಸರನ್ನು ತಪ್ಪಾಗಿ ಸೇರಿಸಿದ್ದಾರೆ ಎಂದು ಎಟಿಎಸ್ ಹೇಳಿದೆ. ಹಣ ಕೊಡದಿದ್ದರೆ ಅಫಿಡವಿಟ್ ಅನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.


ಹಿರಿಯ ಪೊಲೀಸ್ ಅಧಿಕಾರಿ ಹೆಸರು ಉಲ್ಲೇಖಿಸಿ ಅತ್ಯಾಚಾರ ಸಂತ್ರಸ್ತೆ ಸಹಿ ಮಾಡಿದ ಅಫಿಡವಿಟ್ ಸಾಮಾಜಿಕ  ಜಾಲತಾಣದಲ್ಲಿ ಹರಿದಾಡಲು ಪ್ರಾರಂಭಿಸಿದ ವಾರದ ನಂತರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಹಣ ಸುಲಿಗೆ ಮಾಡಲು ಆರೋಪಿಗಳು ಅಧಿಕಾರಿಯ ಆಪ್ತರನ್ನು ಸಂಪರ್ಕಿಸಿದ್ದಾರೆ ಎಂದು ಎಟಿಎಸ್ ಮೂಲಗಳು ತಿಳಿಸಿವೆ. ಇದೇ 9 ರಂದು ಪೊಲೀಸ್ ಮಹಾನಿರ್ದೇಶಕರು ಈ ಬಗ್ಗೆ ತನಿಖೆ ನಡೆಸುವಂತೆ ಎಟಿಎಸ್‌ಗೆ ಆದೇಶಿಸಿದ್ದರು.

Leave a Reply

Your email address will not be published. Required fields are marked *

error: Content is protected !!