ಹೆಚ್. ಹರ್ಷಿತಗೆ ಐದು ಚಿನ್ನದ ಪದಕ
ದಾವಣಗೆರೆ: ಈಚೆಗೆ ನಡೆದ ಮೈಸೂರು ವಿಶ್ವವಿದ್ಯಾನಿಲಯದ ೧೦೨ನೇ ಘಟಿಕೋತ್ಸವದಲ್ಲಿ ಹೆಚ್. ಹರ್ಷಿತ ಎಂಎಸ್ಸಿ ಭೌತಶಾಸ್ತ್ರ ವಿಭಾಗದಲ್ಲಿ ಐದು ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಇದರ ಜೊತೆಗೆ ಜಿಎಟಿಇ ಮತ್ತು ಸಿಎಸ್‌ಐಆರ್, ಯುಜಿಸಿ ಹಾಗೂ ಎನ್‌ಇಟಿ ಪರೀಕ್ಷೆಗಳಲ್ಲಿಯೂ ಉತ್ತೀರ್ಣರಾಗಿರುವ ಹರ್ಷಿತ ಅವರು ಮೂಲತಃ ದಾವಣಗೆರೆಯ ವಿನೋಬಾನಗರದ ನಿವಾಸಿಗಳಾದ ಎಂ. ನಾಗರಾಜ್, ಮಂಜುಳ ದಂಪತಿಯ ಪುತ್ರಿಯಾಗಿದ್ದಾರೆ.