ಮದುವೆ ಊಟ ಬಡಿಸ ಹೊರಟ ತಂಡದ ಮೇಲೆ ಕಾರು ಹರಿದು ಐದು ಸಾವು

ಕಾರು ಹರಿದು ಐದು ಸಾವು
ಪುಣೆ: ಮದುವೆ ಸಮಾರಂಭಕ್ಕೆ ಊಟ ಬಡಿಸಲು ತೆರಳುತ್ತಿದ್ದ ತಂಡದ ಮೇಲೆ ಕಾರು ಹರಿದು ಐವರು ಮಹಿಳೆಯರು ಮೃತಪಟ್ಟ ಘಟನೆ ನಡೆದಿದೆ.
ಪುಣೆಯಿಂದ 50 ಕಿಮೀ ದೂರದ ಶಿರೋಲಿ ಗ್ರಾಮದ ಬಳಿ ರಾತ್ರಿ 10.45 ರ ಸುಮಾರು ಪುಣೆಯಿಂದ ಬಂದಿದ್ದ 17 ಮಹಿಳೆಯರ ಗುಂಪು ಮದುವೆ ಸಮಾರಂಭಕ್ಕೆ ಊಟ ಬಡಿಸಲು ತೆರಳುತ್ತಿತ್ತು. ಈ ವೇಳೆ ವೇಗವಾಗಿ ಬಂದ ಕಾರು ಮಹಿಳೆಯರ ಮೇಲೆ ಹರಿದಿದೆ.
ಐವರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟರೆ, ಮೂವರು ಮಹಿಳೆಯರು ಗಂಭೀರ ಗಾಯಗೊಂಡಿದ್ದು ಅವರನ್ನು ಸನಿಹದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಂತರ ಚಾಲಕ ಪರಾರಿಯಾಗಿದ್ದು ಆತನ ಬಂಧನಕ್ಕೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.