ಶಿವಮೊಗ್ಗದಲ್ಲಿ ಎಫ್.ಎಂ ರೇಡಿಯೋ ಪ್ರಾರಂಭ

ಶಿವಮೊಗ್ಗ : ಬಹುದಿನಗಳಿಂದ ಬೇಡಿಕೆ ಹಂತದಲ್ಲಿ ಶಿವಮೊಗ್ಗ ರೇಡಿಯೋ ಎಫ್.ಎಂ. 90.8 ಇದೀಗ ಕೊಡುಗೆಯಾಗಿ ಸಿಕ್ಕಿದೆ ಶಿವಮೊಗ್ಗದ ಜನರಿಗೆ ಸಿಕ್ಕಿದೆ. ಸದ್ಯ ಎಫ್.ಎಂ. ರೇಡಿಯೋ ಟೆಸ್ಟಿಂಗ್ ಹಂತದಲ್ಲಿದ್ದು, ಇನ್ನೊಂದು ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿದೆ. ಕೊಡಚಾದ್ರಿ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಸೊಸೈಟಿ ಸರ್ಕಾರೇತರ ಸಂಸ್ಥೆ ಶಿವಮೊಗ್ಗ ರೇಡಿಯೋ ಎಫ್.ಎಂ. 90.8 ಪ್ರಾರಂಭಿಸಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಈ ರೇಡಿಯೋಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈಗ ಬೆಳಗ್ಗೆ 9 ಗಂಟೆಯಿAದ ಸಂಜೆ 6 ಗಂಟೆವರೆಗೆ ವಿವಿಧ ಕಾರ್ಯಕ್ರಮಗಳನ್ನು ಪ್ರಾಯೋಗಿಕವಾಗಿ ಪ್ರಸಾರ ಮಾಡಲಾಗುತ್ತಿದೆ.
ಎರಡು ಹೈಟೆಕ್ ಸ್ಟುಡಿಯೋ
ನವುಲೆ ಕೃಷಿ ವಿಶ್ವವಿದ್ಯಾಲಯದ ಮುಂಭಾಗ ಇರುವ ರತ್ನಾಕರ ನಗರದಲ್ಲಿ ಎಫ್.ಎಂ. ರೇಡಿಯೋ ಶಿವಮೊಗ್ಗವನ್ನು ಸ್ಥಾಪಿಸಲಾಗಿದೆ. ಎರಡು ಹೈಟೆಕ್ ಸ್ಟುಡಿಯೋ, ಒಂದು ಕಂಟ್ರೋಲ್ ರೂಂ, ಡೆಸ್ಕ್ ಸ್ಥಾಪಿಸಲಾಗಿದೆ. ಹೊರಾಂಗಣದಲ್ಲಿ ಕಾರ್ಯಕ್ರಮ ರೆಕಾರ್ಡ್ ಮಾಡಲು ಹೈಟೆಕ್ ರೆಕಾರ್ಡಿಂಗ್ ಮೈಕ್‌ಗಳನ್ನು ಕೂಡ ವ್ಯವಸ್ಥೆ ಮಾಡಲಾಗಿದೆ.
ಎಷ್ಟು ಜನ ಕೆಲಸ ಮಾಡುತ್ತಿದ್ದಾರೆ?
ಕೆಲವು ಅನುಭವಿ ಮತ್ತು ಹಿರಿಯರು ರೇಡಿಯೋ ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 13 ಮಂದಿಗೆ ತರಬೇತಿ ನೀಡಲಾಗುತ್ತಿದೆ. ಅವರಿಗೆ ಕಾರ್ಯಕ್ರಮ ನಿರೂಪಣೆ, ಸ್ಕಿçಪ್ಟ್, ತಾಂತ್ರಿಕ ಕೌಶಲ್ಯ ಎಲ್ಲವನ್ನೂ ಕಲಿಸಲಾಗುತ್ತಿದೆ. ವಿಶೇಷ ಭತ್ಯೆ ಜೊತೆಗೆ ಕೆಲಸ ಕಲಿಸಿಕೊಡಲಾಗಿದ್ದು, ಉತ್ತಮ ಅಭ್ಯರ್ಥಿಗಳಿಗೆ ಉದ್ಯೋಗ ಕೊಡುವ ಭರವಸೆ ನೀಡಲಾಗಿದೆ.
ಏನೆಲ್ಲ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ?
ರೇಡಿಯೋ ಶಿವಮೊಗ್ಗ ಉಳಿದ ಎಫ್.ಎಂಗಳ ಹಾಗಲ್ಲ. ಮೌಲ್ಯಯುತ ಹಾಗೂ ಗುಣಮಟ್ಟದ ಶಿಕ್ಷಣ, ಪರಿಸರ, ಕಲೆ, ಸಂಸ್ಕöತಿ, ಸಾಹಿತ್ಯ, ಸರಕಾರಿ ಯೋಜನೆಗಳು, ರೈತರು, ಕಾರ್ಮಿಕರು, ಆಹಾರ, ಸಾವಯವ ಕೃಷಿ ಸೇರಿದಂತೆ ಹಲವು ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ರೇಡಿಯೋ ಶಿವಮೊಗ್ಗ, ಸರ್ಕಾರದ ರೇಡಿಯೋ ಆಗಿದ್ದು, ಖಾಸಗಿ ಎಫ್.ಎಂ. ರೇಡಿಯೋಗಿಂತಲೂ ಭಿನ್ನ. ಇದು ಸಮುದಾಯ ರೇಡಿಯೋ. ಸೀಮಿತ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡುತ್ತದೆ. ಸ್ಥಳೀಯರನ್ನೇ ಬಳಸಿಕೊಂಡು ಕಾರ್ಯಕ್ರಮ ರೂಪಿಸುವುದು ಇದರ ವಿಶೇಷ. 30ರಿಂದ 40 ಕಿ.ಮೀ ವ್ಯಾಪ್ತಿಯಲ್ಲಿ ಇದರ ಕಾರ್ಯಾಚರಣೆ ಇರುತ್ತದೆ. ಗುಡ್ಡಗಾಡುಗಳಲ್ಲಿ ಸಿಗ್ನಲ್ ವ್ಯಾಪ್ತಿ ಕಡಿಮೆ ಇರುತ್ತದೆ. ಪ್ರಸ್ತುತ 50 ಗಿಗಾ ಹರ್ಟ್್ಸ ಸಾಮರ್ಥ್ಯದಲ್ಲಿ ಕೆಲಸ ಆರಂಭಿಸಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!