Food Dept: ದಾವಣಗೆರೆ ಆಹಾರ ಇಲಾಖೆ ಡಿಡಿ ಶಿದ್ರಾಮ ಮಾರಿಹಾಳ ಸೇರಿದಂತೆ ನಾಲ್ವರಿಗೆ ಜಂಟಿ ನಿರ್ದೇಶಕರಾಗಿ ಮುಂಬಡ್ತಿ
December 10, 2024
ದಾವಣಗೆರೆ: (Food Dept) ದಾವಣಗೆರೆ ಜಿಲ್ಲೆಯ ಆಹಾರ ಇಲಾಖೆಯ ಉಪ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿದ್ರಾಮ ಮಾರಿಹಾಳ ಸೇರಿದಂತೆ ನಾಲ್ವರನ್ನು ಉಪ ಆಹಾರ ಇಲಾಖೆಯ ಉಪ ನಿರ್ದೇಶಕ ಸ್ಥಾನದಿಂದ ಜಂಟಿ ನಿರ್ದೇಶಕ ಹುದ್ದೆಗೆ ಮುಂಬಡ್ತಿ ನಿಡಿ
ಕರ್ನಾಟಕ ಸರ್ಕಾರದ ಸಚಿವಾಲಯದಿಂದ ದಿನಾಂಕ 7.12.2024 ರಂದು ಅಧಿಸೂಚನೆ ಹೊರಡಿಸಲಾಗಿದೆ.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಗ್ರೂಪ್ ಎ ವೃಂದದ ನಾಲ್ಕು ಉಪ ನಿರ್ದೇಶಕ ವೃಂದದ ಅಧಿಕಾರಿಗಳಿಗೆ ಜಂಟಿ ನಿರ್ದೇಶಕರ ವೃಂದದ ಹುದ್ದೆಗಳಿಗೆ ಸ್ಥಾನವನ್ನು ಭರ್ತಿ ನೀಡಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ವರೆಗೆ ಸ್ಥಳ ನೀಯುಕ್ತಿಗೊಳಿಸಿ ಆದೇಶಿಸಿದೆ.
ದಾವಣಗೆರೆ ಜಿಲ್ಲೆಯಲ್ಲಿ ಕಳೆದೊಂದು ವರ್ಷದಿಂದ ಉಪನಿರ್ದೇಶಕರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ದಾವಣಗೆರೆ ಜಿಲ್ಲೆ ಇಲ್ಲಿ ಉಪನಿರ್ದೇಶಕರಾಗಿದ್ದ ಶಿದ್ರಾಮ ಮಾರಿಹಾಳ ಇವರನ್ನು ಉಪನಿರ್ದೇಶಕರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ದಾವಣಗೆರೆ ಜಿಲ್ಲೆ ಈ ಹುದ್ದೆಯನ್ನು ಜಂಟಿ ನಿರ್ದೇಶಕರ ಹುದ್ದೆಯಾಗಿ ಉನ್ನತೀಕರಿಸಿ ಹಾಗೆ ಉನ್ನತೀಕರಿಸಿದ ಜಂಟಿ ನಿರ್ದೇಶಕರ ಹುದ್ದೆಗೆ ನೇಮಿಸಲಾಗಿದೆ.
