ಶೋಕಿಗಾಗಿ ಸರಗಳ್ಳತನ.! 24 ಗಂಟೆಯಲ್ಲಿ ಆರೋಪಿತರನ್ನ ಬಂಧಿಸಿದ ದಾವಣಗೆರೆ ಪೊಲೀಸ್ ತಂಡ

ದಾವಣಗೆರೆ: ಮಂಗಳವಾರ ದಿನಾಂಕ10.09.2024 ರಂದು ಸಂಜೆ  ಶ್ರೀಮತಿ ಆಶಾ ಕೆ.ವಿ, ಎಂಬುವವರು ಜೆ.ಹೆಚ್ ಪಟೇಲ್ ಬಡಾವಣೆ, ಶಾಮನೂರು ದಾವಣಗೆರೆ ಇವರು ವಿದ್ಯಾನಗರ ಠಾಣೆಗೆ ಹಾಜರಾಗಿ ಸರಗಳ್ಳತನ ದೂರು ದಾಖಲಿಸಿದ 24 ಗಂಟೆಯೊಳಗೆ ಇಬ್ಬರು ಸರಗಳ್ಳತನ ಮಾಡಿದ್ದ ಆರೋಪಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮದ್ಯಾಹ್ನ ಸುಮಾರು 1-46 ಗಂಟೆಯಲ್ಲಿ ತನ್ನ ಮಗಳು ಓದುತ್ತಿದ್ದ ಜೆ.ಹೆಚ್ ಪಟೇಲ್ ಬಡಾವಣೆಯ ಪೋದಾರ್ ಶಾಲೆಯಿಂದ ಮಗಳನ್ನು ಮನೆಗೆ ಕರೆದುಕೊಂಡು ಬರಲು ಹೋಗಿ ತನ್ನ ಮಗಳನ್ನು ಕರೆದುಕೊಂಡು ವಾಪಸ್ಸು ಮನೆಗೆ ಬರುತ್ತಿರುವಾಗ ಸುಮಾರು 1-52 ಗಂಟೆಯಲ್ಲಿ ಯಾರೋ ಇಬ್ಬರು ವ್ಯಕ್ತಿಗಳು ತನ್ನ ಹಿಂದಿನಿಂದ ಬಂದು ಬೈಕ್‌ನ್ನು ತನಗೆ ಢಿಕ್ಕಿ ಪಡಿಸುವ ರೀತಿಯಲ್ಲಿ ಹೆದರಿಸಿ ತನ್ನನ್ನು ನಿಲ್ಲಿಸಿ ತನ್ನ ಕುತ್ತಿಗೆಯಲ್ಲಿದ್ದ ಬಂಗಾರದ ಸರಗಳನ್ನು ಕಿತ್ತುಕೊಳ್ಳಲು ಕೈಹಾಕಿದ್ದು ತಾನು ಹೆದರಿಕೆಯಿಂದ ತನ್ನ ಕೊರಳಿನಲ್ಲಿದ್ದ ಬಂಗಾರದ ಆಭರಣಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದುರು.

ಆರೋಪಿತರುಗಳು ಬಲವಂತವಾಗಿ ತನ್ನ ಕುತ್ತಿಗೆಯಲ್ಲಿದ್ದ ರೂ 1,05,000/- ಬೆಲೆಯ 15 ಗ್ರಾಂನ ಶಾರ್ಟ್ ಚೈನ್ ಮತ್ತು 37 ಗ್ರಾಂನ ಬಂಗಾರದ ಮಾಂಗಲ್ಯ ಸರದಲ್ಲಿ ಅಂದಾಜು ರೂ 1,40,000/- ಬೆಲೆಯ ಅಂದಾಜು 20 ಗ್ರಾಂನ ಮಾಂಗಲ್ಯ ಸರವನ್ನು ಕಿತ್ತುಕೊಂಡಿದ್ದಾಗಿ ಸದರಿ ಆರೋಪಿತರುಗಳನ್ನು ಪತ್ತೆ ಮಾಡಿ ಹಾಜರುಪಡಿಸುವಂತೆ ದೂರು ನೀಡಿದ್ದು ಸದರಿ ದೂರನ್ನು ಪಡೆದುಕೊಂಡು *ಠಾಣಾ ಗುನ್ನೆ ನಂ 210/2024 ಕಲಂ 309(4) ಬಿಎನ್‌ಎಸ್-2024 ರ ರೀತ್ಯಾ ಪ್ರಕರಣ* ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

ಸದರಿ ಪ್ರಕರಣದಲ್ಲಿ ಮಾಲು ಮತ್ತು ಆರೋಪಿತರನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶ್ರೀ ವಿಜಯಕುಮಾರ್.ಎಂ.ಸಂತೋಷ್ ಮತ್ತು ಶ್ರೀ ಮಂಜುನಾಥ.ಜಿ ಹಾಗೂ ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಶ್ರೀ.ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ, ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಮತಿ ಪ್ರಭಾವತಿ.ಸಿ.ಶೇತಸನದಿ ರವರ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಪಿ.ಎಸ್.ಐ ಮತ್ತು ಸಿಬ್ಬಂದಿ ಗಳನ್ನೊಳಗೊಂಡ ಹಾಗೂ ಜಿಲ್ಲಾ ಅಪರಾಧ ವಿಭಾಗದವರ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಯಿತು.

ಸದರಿ ತಂಡವು ಕೃತ್ಯ ವರದಿಯಾದ 24 ಗಂಟೆಗಳೊಳಗೆ ಆರೋಪಿತರಾದ *1) ಅರುಣ್‌ಕುಮಾರ.ಬಿ, 23 ವರ್ಷ,* ವಾಸ ಕತ್ತಲಗೆರೆ ಗ್ರಾಮ, ಚನ್ನಗಿರಿ ತಾ|| ದಾವಣಗೆರೆ ಜಿಲ್ಲೆ ಸ್ವಂತ ವಿಳಾಸ: ಎಪಿಎಂಸಿ ಹತ್ತಿರ, ತುಮ್ಮಿನಕಟ್ಟೆ ರಸ್ತೆ, ಹಲಗೇರಿ ಗ್ರಾಮ, ರಾಣೆಬೆನ್ನೂರು ತಾ|| ಹಾವೇರಿ ಜಿಲ್ಲೆ ಮತ್ತು *2) ರಮೇಶ್ ಬಿ.ಎಸ್, 19 ವರ್ಷ* , ವಾಸ ಕತ್ತಲಗೆರೆ ಗ್ರಾಮ, ಚನ್ನಗಿರಿ ತಾ|| ದಾವಣಗೆರೆ ಜಿಲ್ಲೆ ರವರನ್ನು *ದಿನಾಂಕ: 11.09.2024 ರಂದು ಪತ್ತೆ ಮಾಡಿ ಆರೋಪಿತರಿಂದ 1) 1,78,000/-ರೂ ಬೆಲೆ ಬಾಳುವ ಬಂಗಾರದ ಸರ ಮತ್ತು ಬಂಗಾರದ ಮಾಂಗಲ್ಯ ಸರ ಮತ್ತು ಕೃತ್ಯಕ್ಕೆ ಬಳಿಸಿದ 50,000/-ರೂ ಬೆಲೆ ಬಾಳುವ ಹೀರೋ ಸ್ಪೆಂಡರ್ ಪ್ಲಸ್ ಬೈಕನ್ನು* ವಶಪಡಿಸಿಕೊಂಡಿರುತ್ತದೆ.

ಆರೋಪಿತರುಗಳನ್ನು ಪತ್ತೆ ಮಾಡಿದ ದಾವಣಗೆರೆ ನಗರ ಉಪವಿಭಾಗದ ಡಿವೈಎಸ್‌ಪಿ ಶ್ರೀ ಮಲ್ಲೇಶ್ ದೊಡ್ಡಮನಿ ರವರ ಮಾರ್ಗದರ್ಶನದಲ್ಲಿ ಶ್ರೀಮತಿ ಪ್ರಭಾವತಿ.ಸಿ.ಶೇತಸನದಿ ಪೊಲೀಸ್ ಇನ್ಸ್ಪೆಕ್ಟರ್ ವಿದ್ಯಾನಗರ ಠಾಣೆ, ಶ್ರೀ ವಿಶ್ವನಾಥ ಜಿ.ಎನ್ ಪಿಎಸ್‌ಐ, ಶ್ರೀ ವಿಜಯ್.ಎಂ ಪಿ.ಎಸ್.ಐ ವಿದ್ಯಾನಗರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಶ್ರೀ ಆನಂದ ಮುಂದಲಮನಿ, ಶ್ರೀ ಲಕ್ಷö್ಮಣ.ಆರ್, ಶ್ರೀ ಶಂಕರ್ ಜಾಧವ್, ಶ್ರೀ ಭೋಜಪ್ಪ ಕಿಚಡಿ, ಶ್ರೀ ಗೋಪಿನಾಥ.ಬಿ.ನಾಯ್ಕ ಹಾಗೂ ಜಿಲ್ಲಾ ಅಪರಾಧ ವಿಭಾಗದ ಸಿಬ್ಬಂದಿಗಳಾದ ಶ್ರೀ ಮಜೀದ್, ಶ್ರೀ ಆಂಜನೇಯ, ಶ್ರೀ ರಾಘವೇಂದ್ರ, ಶ್ರೀ ರಮೇಶ್‌ನಾಯ್ಕ್, ಶ್ರೀ ಬಾಲರಾಜ್ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಶ್ರೀ ರಾಘವೇಂದ್ರ ಮತ್ತು ಸ್ಮಾರ್ಟ್ ಸಿಟಿ ಕಮಾಂಡ್ ಸೆಂಟರ್‌ನ ಶ್ರೀ ಮಾರುತಿ, ಶ್ರೀ ಸೋಮಪ್ಪ ರಾಮಜ್ಜಿ ರವರಿಗೆ ಪೊಲೀಸ್ ಅಧೀಕ್ಷಕರವರಾದ ಶ್ರೀಮತಿ ಉಮಾ ಪ್ರಶಾಂತ್ ಐ.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!