ಸಾರ್ವಜನಿಕರ ಗಮನಕ್ಕೆ ದಾವಣಗೆರೆಯ ಈ ಭಾಗದಲ್ಲಿ ಜ.9 ರಂದು ವಿದ್ಯುತ್ ಕಟ್.!

ದಾವಣಗೆರೆ: ದಾವಣಗೆರೆ ನಗರ ಉಪವಿಭಾಗ-2 ಘಟಕ-4ರ ವ್ಯಾಪ್ತಿಯಲ್ಲಿ ಸಾರ್ವಜನಿಕರಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಕೊಳವೆ ಬಾವಿ ಕೊರೆದು ಮೋಟಾರನ್ನು ಲಿಪ್ಟ್ ಮಾಡುವ ಸಮಯದಲ್ಲಿ ಸುರಕ್ಷತೆ ಹಿತದೃಷ್ಟಿಯಿಂದ ಮಾರ್ಗ ಮುಕ್ತತೆ ನೀಡಬೇಕಾಗಿರುವುದರಿಂದ ಇದೇ ಜನವರಿ 9 ರಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ದಾವಣಗೆರೆ ನಗರ ವ್ಯಾಪ್ತಿಯ ಚಲವಾದಿ ಕೆರೆ, ಎಮ್.ಬಿ ಕೆರೆ, ಹೊಂಡಾ ಸರ್ಕಲ್, ಜಾಲಿನಗರ, ಶಿವಾಜಿ ನಗರ, ತ್ಯಾಪೆರಗಲ್ಲಿ ದೇವಸ್ಥಾನ ಸುತ್ತ-ಮುತ್ತ, ಕಾಡಪ್ಪನಕಣ ಹಾಗೂ ಸುತ್ತ-ಮುತ್ತ, ವಾರ್ಡ್ ಸಂಖ್ಯೆ-18 ರ ಮಟನ್ ಮಾರ್ಕೆಟ್ ಹತ್ತಿರದ ವಿದ್ಯುತ್ ಅಡಚಣೆಯಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!