ಅತ್ಯುತ್ತಮ ‘ಅಪರಾಧ ವರದಿ’ ಗಾಗಿ ಟಿ.ಕೆ.ಮಲಗೊಂಡ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪನೆಗೆ 1.10 ಲಕ್ಷ ನೀಡಿದ ಹಿರಿಯ ಪತ್ರಕರ್ತ

For the best 'Crime Report'  A senior journalist donated 1.10 lakhs to establish an endowment fund in the name of TK Malagonda

ಅತ್ಯುತ್ತಮ 'ಅಪರಾಧ ವರದಿ' ಗಾಗಿ ಟಿ.ಕೆ.ಮಲಗೊಂಡ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪನೆಗೆ 1.10 ಲಕ್ಷ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ಪತ್ರಕರ್ತರ ದತ್ತಿ ನಿಧಿಗೆ 1.10 ಲಕ್ಷ ರೂಪಾಯಿ ಹಣವನ್ನು ನೀಡಿದ ಹಿರಿಯ ಪತ್ರಕರಾದ ಟಿ.ಕೆ.ಮಲಗೊಂಡ ಅವರನ್ನು ಅಭಿನಂದಿಸಿದ‌ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ರಾಜ್ಯಾಧ್ಯಕ್ಷರಾದ ತಗಡೂರ ಅವರೂ..! —

‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ (ಕೆಯುಡಬ್ಲ್ಯೂಜೆ)ಯ ದತ್ತಿ ನಿಧಿಗೆ ವಿಜಯಪುರ ಜಿಲ್ಲೆಯ ಹಿರಿಯ ಪತ್ರಕರ್ತ ಟಿ. ಕೆ. ಮಲಗೊಂಡ ಅವರು ರೂಪಾಯಿ 1.10 ಲಕ್ಷ ರೂಪಾಯಿ ಹಣವನ್ನು ನೀಡಿದ್ದಾರೆ…!

ಬೆಂಗಳೂರಿನಲ್ಲಿ ಸಂಘದ ಕಚೇರಿಯಲ್ಲಿ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರ ಅವರಿಗೆ ದತ್ತಿ ನಿಧಿ ಸ್ಥಾಪಿಸಲು ಟಿ.ಕೆ.ಮಲಗೊಂಡ ಅವರು ಹಣ ನೀಡಿದರು..!
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಮಲಗೊಂಡ ಅವರನ್ನು ಸನ್ಮಾನಿಸಿ ಅಭಿನಂದಿಸಿದರು..!

ಬೆಂಗಳೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರ ಮಾತನಾಡಿದರು..!

:ಅಪರಾಧಕ್ಕೆ ಸವಾಲು’ ಪತ್ರಿಕೆಯ ಸಂಪಾದಕರಾದ ಟಿ.ಕೆ.ಮಲಗೊಂಡ ಅವರು, ಪ್ರತಿ ವರ್ಷ ಕೆ.ಯು.ಡಬ್ಲ್ಯೂ.ಜೆ.ಯ ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭದಲ್ಲಿ ಅತ್ಯುತ್ತಮ ‘ಅಪರಾಧ ವರದಿ’ಗಾಗಿ ನೀಡುವಂತೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರಿಗೆ ತಿಳಿಸಿದರು..!

ಈ ಸರಳ ಸಮಾರಂಭದಲ್ಲಿ ‘ವಿಜಯಪುರ ಜಿಲ್ಲಾ ಪತ್ರಕರ್ತರ ಸಂಘ’ದ ಇರ್ಫಾನ್ ಶೇಖ್, ‘ಯಾದಗಿರಿ ಜಿಲ್ಲಾ ಸಂಘದ ಖಜಾಂಚಿ’ ಕುಮಾರಸ್ವಾಮಿ, ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ದಿನೇಶ ಗೌಡಗೆರೆ, ರಾಷ್ಟ್ರೀಯ ಮಂಡಳಿ ಸದಸ್ಯ ಸಿ.ಹೆಂಜಾರಪ್ಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!