ಆರ್.ಎಲ್.ಜಾಲಪ್ಪ ಅವರ ನಿಧನಕ್ಕೆ ಎಸ್ಸೆಸ್, ಎಸ್ಸೆಸ್ಸೆಂ ಮತ್ತು ಜಿಲ್ಲಾ ಕಾಂಗ್ರೆಸ್ ಸಂತಾಪ
ದಾವಣಗೆರೆ: ಹಿರಿಯ ನಾಯಕರಾದ ಆರ್.ಎಲ್.ಜಾಲಪ್ಪ ಅವರ ಅಕಾಲಿಕ ನಿಧನಕ್ಕೆ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು, ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಅವರುಗಳು ತಿವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಆರ್.ಎಲ್.ಜಾಲಪ್ಪ ಅವರ ನಿಧನದಿಂದಾಗಿ ಪಕ್ಷಕ್ಕೆ ಹಾಗೂ ನಾಡಿಗೆ ತುಂಬಲಾರದ ನಷ್ಟ ಉಂಟಾಗಿದೆ. ಕೇಂದ್ರ ಸಚಿವರಾಗಿ, ನಾಲ್ಕು ಬಾರಿ ಸಂಸದರಾಗಿ, ಜನಸೇವೆಯಲ್ಲಿ ತೊಗಡಿಕೊಂಡಿದ್ದ ಅವರು ಕರ್ನಾಟಕ ರಾಜಕೀಯಲ್ಲಿ ಪ್ರಮುಖರಾಗಿದ್ದವರು ಎಂದು ಸ್ಮರಿಸಿದ್ದಾರೆ.
ಆರ್.ಎಲ್.ಜಾಲಪ್ಪ ಇವರ ನಿಧನದಿಂದ ರಾಜಕೀಯ ರಂಗ ಅನಾಥವಾಗಿದ್ದು, ಅವರ ಆತ್ಮಕ್ಕೆ ಭಗವಂತ ಮುಕ್ತ ದಯ ಪಾಲಿಸುವದರೊಂದಿಗೆ ಅವರ ಕುಟುಂಬ ವರ್ಗಕ್ಕೆ, ಅಭಿಮಾನಿಗಳಿಗೆ ಈ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಕೋರುತ್ತ ಅವರ ನಿಧನಕ್ಕೆ ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ.