ಕ್ಷೇತ್ರದ ಅಭಿವೃದ್ಧಿಗಾಗಿ ನಾವುಗಳೇ, ಮನೆ ಮನೆಗೆ ತೆರಳಿ ಮತ ಭಿಕ್ಷೆ ಕೇಳಿ ಮಲ್ಲಿಕಾರ್ಜುನ್ ಗೆಲ್ಲಿಸೋಣ – ಚಂದ್ರಯ್ಯ

ಮಲ್ಲಿಕಾರ್ಜುನ್ ಗೆಲ್ಲಿಸೋಣ - ಚಂದ್ರಯ್ಯ

ದಾವಣಗೆರೆ: ಎಸ್.ಎಸ್ ಮಲ್ಲಿಕಾರ್ಜುನ್ ಬದುಕಿರುವವರೆಗೂ ಶಾಸಕರಾದರೇ, ನಾವುಗಳು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೇಳುವ ಅವಶ್ಯಕತೆ ಇಲ್ಲ, ಅವರೇ ನಮ್ಮ ಅವಶ್ಯಕತೆ, ನಿರೀಕ್ಷೆಗಿಂತ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಮಾಡುತ್ತಾರೆ ಅದಕ್ಕೋಸ್ಕರ ನಾವುಗಳೇ ಮನೆ ಮನೆಗೆ ತೆರಳಿ ಮತ ಭಿಕ್ಷೆ ಕೇಳಿ ಮಲ್ಲಿಕಾರ್ಜುನ್ ಗೆಲ್ಲಿಸೋಣ ಎಂದು ಆಂಜನೇಯ ಬಡಾವಣೆಯಲ್ಲಿ ಉತ್ತರ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಹಾಗೂ ಎಸ್.ಎಸ್.ಎಂ ಅಭಿಮಾನಿಗಳ ಪೂರ್ವಭಾವಿ ಸಭೆಯಲ್ಲಿ ವಾರ್ಡಿನ ಹಿರಿಯ ನಾಗರಿಕರಾದ ಚಂದ್ರಯ್ಯ ಎಲ್ಲರನ್ನೂ ಮನವಿ ಮಾಡಿದರು.
ಕೇವಲ ನಾವು ನಮ್ಮ ಮನೆ ಚೆನ್ನಾಗಿರಲಿ ಎನ್ನುವ ರಾಜಕಾರಣಿಗಳ ನಡುವೆ, ಸದಾ ಕ್ಷೇತ್ರದ ಅಭಿವೃದ್ಧಿ ಬಯಸುವ ಭ್ರಷ್ಟಾಚಾರ ರಹಿತ ಹಾಗೂ ಮುಂದಿನ 50 ವರ್ಷಗಳ ಯೋಜನೆ ರೂಪಿಸುವ ಶಕ್ತಿ ಹಾಗೂ ದೂರ ದೃಷ್ಟಿಯುಳ್ಳ ನಾಯಕ ಎಸ್ಎಸ್ ಮಲ್ಲಿಕಾರ್ಜುನ್ ಅವರ ಅವಶ್ಯಕತೆ ನಮಗಿದೆ ಎಂದು ನಿವೃತ್ತ ಡಿವೈಎಸ್ಪಿ ಅರವಿಂದ್ ಗೋಡ್ಬಾಳೆ ತಮ್ಮ ಅಭಿಪ್ರಾಯ ತಿಳಿಸಿದರು.
ನಮ್ಮ ವಾರ್ಡ್ಗೆ ನಾವು ಲೈಬ್ರರಿ ಕೇಳಲು ಹೋದೆವು, ಅವರು ಹೈಟೆಕ್ ಲೈಬ್ರರಿ ಮಂಜೂರು ಮಾಡಿದರು. ಕೇಳುವುದಕ್ಕಿಂತ ಹೆಚ್ಚಾಗಿ ನಮ್ಮ ಅವಶ್ಯಕತೆಗೆ ತಕ್ಕಂತೆ ಸ್ಪಂದಿಸುವಂತಹ ಇಂತಹ ನಾಯಕನನ್ನು ಅಭಿವೃದ್ಧಿಗಾಗಿ ಪಕ್ಷತೀತವಾಗಿ ಗೆಲ್ಲಿಸುವ ಕಾರ್ಯ ನಾವುಗಳು ಮಾಡಬೇಕಾಗಿದೆ ಎಂದು ನಾಗರಿಕ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷರಾದ ಕೆ.ಎಸ್ ಈಶ್ವರಪ್ಪ ತಮ್ಮ ಅಭಿಪ್ರಾಯ ಮಂಡಿಸಿದರು.
ಸಮಸ್ಯೆಗಳು ಬಂದಾಗ ಎಲ್ಲರನ್ನೂ ಗಣನೆಗೆ ತೆಗೆದುಕೊಳ್ಳುವ ಮೂಲಕ ದಿಟ್ಟ ನಿರ್ಧಾರ ತೆಗೆದುಕೊಳ್ಳುವಂತಹ ನಾಯಕ ಎಸ್.ಎಸ್ ಮಲ್ಲಿಕಾರ್ಜುನ್ ಎಂದು ಹೇಳಿದ ನಿವೃತ್ತ ಶಿಕ್ಷಕ ಸಿದ್ದೇಶ್, ಮಲ್ಲಿಕಾರ್ಜುನರವರು ಸದಾ ಸಾರ್ವಜನಿಕರ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸುವ ವ್ಯಕ್ತಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷರಾದ ಶಾಮನೂರು ಟಿ ಬಸವರಾಜ್, ಬಿಐಇಟಿ ಪ್ರಾಂಶುಪಾಲರಾದ ಎಚ್.ಬಿ ಅರವಿಂದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಜಿ ಶಿವಕುಮಾರ್, ವಾರ್ಡ್ ಅಧ್ಯಕ್ಷರಾದ ಮಾಕನೂರ್ ರಾಜಶೇಖರಪ್ಪ, ಹಿರಿಯರಾದ ಶಾಮನೂರ್ ಗೌಡ್ರ ರವಿ, ಅರಕೆರೆ ಪರಮೇಶ್ವರಪ್ಪ, ಸುಜಾತಾ ರವಿ, ಹುಚ್ಚವನಹಳ್ಳಿ ಸೋಮಶೇಖರಪ್ಪ, ಅನಿಲ್ ಗೌಡ, ನವೀನ್ ಕಕ್ಕರಗೊಳ್ಳ, ಸುರೇಶ್ ಕೊಂಡಜ್ಜಿ, ನಟರಾಜ್, ಮಧು, ತಿಪ್ಪಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!