ಪೊಲೀಸರೇ ವಿಲನ್ ಆದ್ರ ಪ್ರೇಮಿಗಳಿಗೆ ?
ದಾವಣಗೆರೆ : ಪ್ರೀತಿಸುತ್ತಿದ್ದ ಪ್ರೇಮಿಗಳಿಗೆ ಪೊಲೀಸರೇ ವಿಲನ್ ಆದ್ರ? ಹೌದು ಪೊಲೀಸರೇ ನಮ್ಮ ಪಾಲಿಗೆ ವಿಲನ್ ಆದರು ಎಂದು ನೊಂದ ಪ್ರೇಮಿಯೊಬ್ಬ ಪತ್ರಿಕಾ ಗೋಷ್ಠಿಯಲ್ಲಿ ತನ್ನ ಅಳಲು ತೋಡಿಕೊಂಡಿದ್ದಾನೆ ಶಿವರಾಜ್. ಮಲೆಬೆನ್ನೂರು ನಗರದ ಶಿವರಾಜ್ ಮತ್ತು ಚಂದನ ಎಂಬ ಪ್ರೇಮಿಗಳು ಹಲವಾರು ವರ್ಷಗಳಿಂದ ಸ್ವಚ್ಛಂದವಾಗಿ ಲೌಕಿಕ ಪ್ರಪಂಚವನ್ನು ಮರೆತು ಪ್ರೀತಿಸುತ್ತಿದ್ದರು. ಇಂತಹ ಸಂಧರ್ಭದಲ್ಲಿ ಹುಡುಗಿಯ ತಂದೆ ತಾಯಿ ಬಂದು ಬಳಗದವರು ಚಂದನಾಳಿಗೆ ಬೇರೆ ವರನಿಗೆ ಮದುವೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ತಿಳಿದು ಚಂದನ ಮನೆಬಿಟ್ಟು ದಿನಾಂಕ. 28 – 2 -2022ರಂದು ತಾನು ಪ್ರೀತಿಸುತ್ತಿದ್ದ ಶಿವರಾಜ್ ಬಳಿ ಬಂದು ನಾನು ಬೇರೆಯವರನ್ನು ಮದುವೆ ಮಾಡಿಕೊಳ್ಳುವುದಿಲ್ಲ ಮದುವೆ ಆಗುವುದಾದರೆ ಅಂತ ನಿನ್ನನ್ನೇ ಹೊರತು ಇನ್ನಾರಿಗೂ ಆಗುವುದಿಲ್ಲ. ನನ್ನನ್ನು ಆದಷ್ಟು ಬೇಗ ಮದುವೆ ಮಾಡಿಕೋ ಎಂದು ಹೇಳುತ್ತಾಳೆ.
ಹಾಗಾಗಿ ಶಿವರಾಜ್ ತನ್ನ ಮನೆಯಲ್ಲಿ ಎಲ್ಲರಿಗೂ ತಿಳಿಸಿ ದಿನಾಂಕ.28-2-2022ರಂದು ಕಡ್ಲೆಬಾಳು ಗ್ರಾಮದ ನಾಗಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ತಾಯಿ ಹಾಗೂ ಗುರುಹಿರಿಯರ ಸ್ನೇಹಿತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗುತ್ತಾರೆ.
ನಂತರ 2-3-2022ರ ಬುದವಾರ ಹರಿಹರದ ವಿವಾಹ ನೋಂದಾವಣಾ ಕಚೇರಿಯಲ್ಲಿ ವಿವಾಹ ನೋಂದವಣೆಗಾಗಿ ಅರ್ಜಿ ಸಲ್ಲಿಸಲು ಹೋದಾಗ ಚಂದನಳ ತಂದೆ-ತಾಯಿ ಅಣ್ಣ ಸಂಬಂಧಿಕರಿಗೆ ಮಾಹಿತಿ ಸಿಕ್ಕು ಸುಮಾರು 50ರಿಂದ 60 ಜನ ಹರಿಹರದ ನೊಂದಾವಣೆ ಕಚೇರಿಗೆ ಬಂದು ನಾವು ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ನಮ್ಮ ಮಗಳು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದೇವೆ. ನೀನು ಇವಳನ್ನು ಕರೆದುಕೊಂಡು ಹೋಗಿದ್ದಿಯ ಎಂದು ನಮ್ಮ ಮೇಲೆ ಹಲ್ಲೆ ನಡೆಸಲು ಯತ್ನಿಸುತ್ತಾರೆ. ಅಲ್ಲಿಂದ ನಾವು ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಬಂದು ಚಂದನ ನಾನು ಕಾಣೆಯಾಗಿಲ್ಲ ಸ್ವಇಚ್ಛೆಯಿಂದ ಬಂದು ಶಿವರಾಜನನ್ನು ಮದುವೆಯಾಗಿದ್ದೇನೆ ಎಂದು ಹೇಳುತ್ತಾಳೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲೆ ಮಾತುಕತೆ ನಡೆಸೋಣ ಬನ್ನಿ ಎಂದು ಕರೆದುಕೊಂಡು ಹೋಗಿ ಪೊಲೀಸರಾದ ಲಕ್ಷ್ಮಣ್ ಹಾಗೂ ಸಂತೋಷ್ ಎಂಬುವರು ನನ್ನ ಮೊಬೈಲನ್ನು ಕಸಿದುಕೊಂಡು ನನ್ನನ್ನು ಹೊರಗಡೆ ಬಿಸಿಲಿನಲ್ಲಿ ನಿಲ್ಲಿಸಿ ನನ್ನ ಪತ್ನಿ ಚಂದನಗೆ ಅವರ ತಂದೆ ತಾಯಿ ಜೊತೆ ಮಾತನಾಡಲು ಬಿಟ್ಟು ಹೆದರಿಸಿ ಬೆದರಿಸಿ ನೀನು ಮದುವೆಯಾದ ಶಿವರಾಜ್ ನನ್ನು ಕೊಲೆ ಮಾಡುತ್ತೇವೆ. ನಿನಗೆ ಅವನೇ ಬೇಕೆಂದು ಹಠ ಮಾಡಿದರೆ ನಿನ್ನನ್ನು ಸಹ ಸಾಯಿಸುತ್ತೇವೆ ಎಂದು ಹೆದರಿಸಿ ಅವಳು ಒಪ್ಪದೇ ಇದ್ದ ಕಾಲದಲ್ಲಿ ಪೊಲೀಸರು ನನ್ನ ಪತ್ನಿಯನ್ನು ಸುಮಾರು ಗಂಟೆಗಳ ಕಾಲ ಠಾಣೆಯಲ್ಲಿ ಕೂರಿಸಿ ಹಿಂಸೆ ಕೊಟ್ಟಿದ್ದಾರೆ. ನನಗೆ ನನ್ನ ಪತ್ನಿಯ ಜೊತೆ ಮಾತನಾಡಲು ಅವಕಾಶ ಕೊಡದೆ ಇಲ್ಲಸಲ್ಲದ ಮಾತುಗಳನ್ನು ಹೇಳಿ ಚಂದನಳ ಮನಸ್ಸು ಬದಲಾಯಿಸಲು ಪ್ರಯತ್ನಿಸಿದರು. ಇದಕ್ಕೂ ಒಪ್ಪದಿದ್ದಾಗ ಏರುಧ್ವನಿಯಲ್ಲಿ ಇನ್ನು ಮುಂದೆ ಆ ಹುಡುಗಿಯ ತಂಟೆಗೆ ಹೋಗಬೇಡ ಹುಡುಗಿಯ ತಂದೆ ತಾಯಿ ಸಂಬಂಧಿಕರು ಬಲಿಷ್ಠ ರಿದ್ದಾರೆ. ಹುಡುಗಿ ಅವಳ ಇಷ್ಟದಂತೆ ಅವಳ ತಂದೆ ತಾಯಿ ಮನೆಗೆ ಹೋಗುತ್ತಿದ್ದಾಳೆ. ನೀನು ಬೇರೆ ಹುಡುಗಿಯ ಜೊತೆ ಮದುವೆಯಾಗು ಇಲ್ಲವಾದರೆ ನೀನು ಜೀವನಪೂರ್ತಿ ಜೈಲಿನಲ್ಲಿ ಇರುವ ಹಾಗೆ ಮಾಡುತ್ತೇವೆ ಎಂದು ಬೆದರಿಸುತ್ತಾರೆ. ಆದಿನ ಚಂದನಾಳನ್ನು ಅವರ ತಂದೆ ತಾಯಿಗಳ ಜೊತೆ ಕಳುಹಿಸುತ್ತಾರೆ. ಹೀಗೆ ನಾನು ಮದುವೆ ಆಗಿರುವ ಚಂದನಳನ್ನು ಬಲವಂತವಾಗಿ ಕರೆದು ಹೋಗಿದ್ದಾರೆ. ನನಗೆ ನ್ಯಾಯ ಕೊಡಿಸಿ ಹಾಗೂ ಪೊಲೀಸರಿಗೆ ಶಿಕ್ಷೆ ಆಗಬೇಕೆಂದು ಮನವಿ ಮಾಡಿದ್ದಾರೆ.