Forest: ದಾವಣಗೆರೆ ವಲಯ ವಿಭಾಗದ ಅರಣ್ಯ ಇಲಾಖೆಯಲ್ಲಿ ಅವ್ಯವಹಾರ ತನಿಖೆಗೆ ಯುವ ಭಾರತ್ ಗ್ರೀನ್ ಬ್ರಿಗೇಡ್ ಒತ್ತಾಯ

davanagere Forest department complaint

ದಾವಣಗೆರೆ : ಜಿಲ್ಲೆಯ ದಾವಣಗೆರೆ ವಲಯ ವಿಭಾಗದ ಅರಣ್ಯ ಇಲಾಖೆಯಲ್ಲಿ (FOREST) ಸಾಕಷ್ಟು ಅವ್ಯವಹಾರ ನಡೆಯುತ್ತಿದ್ದು, ಸಾರ್ವಜನಿಕರು, ಸಂಘ ಸಂಸ್ಥೆಗಳು ನೀಡುವ ದೂರಿಗೆ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ ಎಂದು ಆರೋಪಿಸಿರುವ ಯುವ ಭಾರತ್ ಗ್ರೀನ್ ಬ್ರಿಗೇಡ್ ತನಿಖೆ ನಡೆಸುವಂತೆ ಅರಣ್ಯ ಹಾಗೂ ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದೆ.

ದಾವಣಗೆರೆ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಹಿಂಭಾಗದಲ್ಲಿನ ದಾವಣಗೆರೆ ವಲಯಕ್ಕೆ ಸಂಬಂಧಿಸಿದಂತೆ 2022 ವರ್ಷದಲ್ಲಿ ದಾವಣಗೆರೆ ವಲಯ ಅರಣ್ಯ ಇಲಾಖೆಯಿಂದ ನಗರ ಹಸರೀಕರಣಕ್ಕಾಗಿ ಗಿಡಗಳನ್ನು ಬಳಸಲಾಗಿರುತ್ತದೆ, ಅರಣ್ಯ ಇಲಾಖೆಯಿಂದ ಸುಮಾರು 5000 ಗಿಡಗಳನ್ನು 2022 ರ ಹಸರಕರಣಕ್ಕಾಗಿ 14/20 ರ ಮಾಧರಿಯಲ್ಲಿ ಬೆಳಸಲು ನಿಗಧಿತ ಗುರಿ ನಿಗಧಿಪಡಿಸಿರುತ್ತಾರೆ. ಆದರೆ ಸದರಿ ಗಿಡಗಳು ಜೂನ್ ಸಮಿಪಿಸಿದ್ದರೂ ಸಹ ಯಾವುದೇ ಗಿಡಗಳು ಬೆಳವಣಿಗೆಯಾಗಿರುವುದಿಲ್ಲ, ಆದರೆ ಸದರಿ ಗಿಡಗಳಿಗೆ ಹಣವನ್ನು ಹಣವನ್ನು ಬಿಡುಗಡೆ ಗೊಳಿಸಿದ್ದಾರೆ. ಈ ಬಗ್ಗೆ ವಲಯ ಅರಣ್ಯಾಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲು ದೂರು ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ.

ಈ ಹಿಂದೆ ದಾವಣಗೆರೆ ವಲಯದ ನೆಡುತೋಪು ಕಾಯುವ ಕೂಲಿಕಾರರ ಸಂಬಳವು ಇಲಾಖೆಯ ಆದೇಶದಂತೆ ನೇರವಾಗಿ ಅವರ ಖಾತೆಗೆ ನೀಡಲಾಗುತ್ತಿದ್ದು, ಆದರೆ ದಾವಣಗೆರೆ ವಲಯ ಅರಣ್ಯಾಧಿಕಾರಿಯಾಗಿ ದೇವರಾಜ್ ರವರು ಅಧಿಕಾರ ಸ್ವೀಕರಿಸಿದ ನಂತರ ಸಂಬಳವನ್ನು ನೇರವಾಗಿ ನೀಡದೇ ಗುತ್ತಿಗೆದಾರರ ಮುಖಾಂತರ ನೀಡುತ್ತಿದ್ದು, ಇದು ಅಕ್ರಮಕ್ಕೆ ದಾರಿ ಮಾಡಿಕೊಟ್ಟಂತಾಗಿರುತ್ತದೆ.

ಹರಿಹರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಿಡ ನೆಡುವ ಕಾಮಗಾರಿ ಮಂಜೂರಾಗಿದ್ದರೂ ಸಹ ಅದನ್ನು ದುರುದ್ದೇಶದಿಂದ ಕಾಮಗಾರಿಯನ್ನು ಬೇರೆಡೆ ಸ್ಥಳಾಂತರ ಮಾಡಿದ್ದು, ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ.ಹರಿಹರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಡ್ಡಗಳಲ್ಲಿ ವಲಯ ಅರಣ್ಯಾಧಿಕಾರಿಗಳಾದ ದೇವರಾಜ್ ಅವರು ಬಂದಾಗಿನಿಂದ ಗುಡ್ಡಗಳಲ್ಲಿ ನೆಡುಸೋಮ ಕಾಯಲು ಕೆಲವೇ ಸಿಬ್ಬಂದಿ ಇರುತ್ತಾರೆ ಈ ಬಗ್ಗೆಯೂ ಸಹ ಯಾವುದೇ ಕ್ರಮವಾಗಿರುವುದಿಲ್ಲ.

ದಾವಣಗೆರೆ ವಲಯ ವ್ಯಾಪ್ತಿಯ ಕೊಂಡಜ್ಜಿ ಅರಣ್ಯ ಪ್ರದೇಶದಲ್ಲಿ ಬೇಸಿಗೆಯಲ್ಲಿ ನೀರು ಒದಗಿಸಲು ಪರಿಸರ ಪ್ರಿಯರು ಮನವಿ ನೀಡಿದ್ದರೂ ಸಹ ಕ್ರಮಕೈಗೊಂಡಿರುವುದಿಲ್ಲ.ದಾವಣಗೆರೆ ವಲಯದ ವಿಭಾಗದಲ್ಲಿ ನಡೆಯಲಾಗಿರುವ ಬಹುತೇಕ ಟೆಂಡರ್ ಗಳು. ನಡೆದಿರುವುದು ಗಮನಾರ್ಹ. ತಮಗೆ ಬೇಕಾದವರಿಗೆ ಅನುಕೂಲ ಯಾವುದೇ ಪಾರದರ್ಶಕತೆ ಇಲ್ಲದೇ ಮಾಡಿಕೊಡುವ ಉದ್ದೇಶದಿಂದ ಟೆಂಡರ್ನಿ ಯಮಾವಳಿಗಳನ್ನು ಗಾಳಿಗೆ ತೂರುವ ಕೆಲಸ ನಡೆಯುತ್ತಿದ್ದು ಅಕ್ರಮಕ್ಕೆ ದಾರಿ ಮಾಡಿದಂತಾಗಿದೆ.

ಈ ಎಲ್ಲಾ ದೂರುಗಳ ಹಿನ್ನೆಲೆಯಲ್ಲಿ ನಮ್ಮ ದೂರು ಪರಿಶೀಲಿಸಿ ತುರ್ತು ಕ್ರಮ ಕೈಗೊಳ್ಳಬೇಕೆಂದು ಯುವ ಭಾರತ್ ಗ್ರೀನ್ ಬ್ರಿಗೇಡ್ ನಾಗರಾಜ್ ಸುರ್ವೆ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!