ಸೋಲಿನ ಹತಾಶೆಯಿಂದ ಕೋಮುದ್ವೇಷ ಬಿತ್ತುವ ಹೇಳಿಕೆ ನೀಡುತ್ತಿರುವ ಮಾಜಿ ಶಾಸಕ ಬಿ.ಪಿ. ಹರೀಶ್ – ಕೆ.ಎಲ್.ಹರೀಶ್ ಬಸಾಪುರ.
ಮಲೆಬೆನ್ನೂರು: ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತ ಗಳಿಸಿದ್ದು, ಇದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜನವಿರೋಧಿ, ರೈತ ವಿರೋಧಿ ನೀತಿ ಹಾಗೂ ಜನಸಾಮಾನ್ಯರು ಜೀವನ ನಡೆಸಲು ಕಷ್ಟವಾಗುವಂತೆ ಏರಿರುವ ಬೆಲೆಯೇರಿಕೆಗಳ ವಿರುದ್ಧ ಜನರು ನೀಡಿರುವ ಆಕ್ರೋಶದ ತೀರ್ಪ ಆಗಿದ್ದು ಇದನ್ನು ಒಪ್ಪಿಕೊಳ್ಳದ ಮಾಜಿ ಶಾಸಕರಾದ ಬಿ.ಪಿ. ಹರೀಶ್ ರವರು ಇದರಲ್ಲೂ ಸಹ ಕೋಮುದ್ವೇಷ ಬಿತ್ತುವ ಕಾರ್ಯ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಕೆ.ಎಲ್.ಹರೀಶ್ ಬಸಾಪುರ ಆಕ್ರೋಶ ಪಡಿಸಿದ್ದಾರೆ.
ಕಳೆದ ಬಾರಿ 7 ಸ್ಥಾನ ಗೆದ್ದಂತಹ ಕಾಂಗ್ರೆಸ್ ಪಕ್ಷ ಈ ಬಾರಿ 12 ಸ್ಥಾನ ಗಳಿಸಿದೆ ಎಂದರೆ ಈ ಗೆಲುವಿಗೆ ಎಲ್ಲಾ ಜಾತಿ, ಧರ್ಮಗಳ ಮತದಾರರು ಕಾರಣ ಎಂಬುದನ್ನು ಬಿ.ಪಿ. ಹರೀಶ್ ಅವರು ತಿಳಿಯಬೇಕು.
ಕ್ಷೇತ್ರದಲ್ಲಿ ಎಲ್ಲಾ ಜಾತಿ-ಧರ್ಮದ ಜನರು ಸೌಹಾರ್ದತೆಯಿಂದ ಬಾಳುತ್ತಿದ್ದು, ನಿಮ್ಮ ರಾಜಕೀಯ ಭವಿಷ್ಯಕ್ಕಾಗಿ ಜನರ ನಡುವೆ ಕೋಮುದ್ವೇಷ ಬಿತ್ತದೆ, ಚುನಾವಣೆಯಲ್ಲಿ ಮತದಾರರು ನೀಡಿದ ತೀರ್ಪನ್ನು ಗೌರವಿಸಬೇಕು.
ಮುಂದಿನ ದಿನಗಳಲ್ಲಿ ಅಭಿವೃದ್ಧಿ ವಿಷಯದ ಮೇಲೆ ಚುನಾವಣೆ ನಡೆಸಬೇಕು ವಿನಹ ಜಾತಿ ಧರ್ಮದ ಆಧಾರದಿಂದ ಅಲ್ಲ ಎಂದು ತಿಳಿಸಿದರು.
ಕೆ.ಎಲ್.ಹರೀಶ್ ಬಸಾಪುರ.