ಲೋಕಲ್ ಸುದ್ದಿ

ಜುಲೈ 21 ರಂದು ಚನ್ನಗಿರಿಯಲ್ಲಿ ಉಚಿತ ಮೂಲವ್ಯಾಧಿ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ

ಜುಲೈ 21 ರಂದು ಚನ್ನಗಿರಿಯಲ್ಲಿ ಉಚಿತ ಮೂಲವ್ಯಾಧಿ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ

ದಾವಣಗೆರೆ: ದಾವಣಗೆರೆ ಜಿಲ್ಲಾ ಪಂಚಾಯತ್ ಜಿಲ್ಲಾ ಆಯೂಷ ವಿಭಾಗ ಚನ್ನಗಿರಿ ತಾಲ್ಲೂಕು ಆಯುರ್ವೇದ ಆಸ್ಫತ್ರೆ ವತಿಯಿಂದ ಉಚಿತ ಮೂಲವ್ಯಾಧಿ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವನ್ನ ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜಿಲ್ಲಾ ಆಯುಷ್ ಅಧಿಕಾರಿಗಳು, ದಾವಣಗೆರೆ ಇವರ ಆದೇಶದನ್ವಯ ಎಲ್ಲಾ ವೈದ್ಯಾಧಿಕಾರಿಗಳು ಸದರಿ ಚಿಕಿತ್ಸಾ ಶಿಬಿರಕ್ಕೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇರುವ ರೋಗಿಗಳನ್ನು ಕಳುಹಿಸಲು ಸೂಚಿಸಲಾಗಿದೆ. ಡಾ.ಸುಧಾ ಹೆಚ್.ಎಂ, ಮತ್ತು ಡಾ.ಶಿವಕುಮಾರ್ ಬಿ. ತಜ್ಞ ವೈದ್ಯರುಗಳು (ಶಲ್ಯ ವಿಭಾಗ) ಇವರು ಶಿಬಿರವನ್ನು ನಡೆಸಿಕೊಡಲಿದ್ದಾರೆ.

ಗುದಗತ ರೋಗಗಳಾದ ಫೈಲ್ಸ್ರ್, ಫಿಜರ್, ಭಗಂದರ, ರೋಗಗಳಿಗೆ ತಜ್ಞ ವೈದ್ಯರುಗಳು ತಪಾಸಣೆ ನಡೆಸಲಿದ್ದಾರೆ, ಸಾರ್ವಜನಿಕರು ಇದರ ಸದುಪಯೋಗವನ್ನ ಪಡೆದುಕೊಳ್ಳಬೇಕೆಂದು ವೈಧ್ಯಾಧಿಕಾರಿಗಳು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top