ಮುಕ್ತ ವಿವಿ : ಅರ್ಜಿ ಸಲ್ಲಿಕೆಗೆ ಮಾ. 31 ಕೊನೆಯ ದಿನ
ದಾವಣಗೆರೆ : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2021-22ರ ಜನವರಿ ಆವೃತಿಯ ಪ್ರಥಮ ವರ್ಷದ ಬಿ.ಎ. ಬಿ.ಕಾಂ. ಬಿ.ಎಲ್.ಐ.ಎಸ್ಸಿ, ಬಿ.ಬಿ.ಎ, ಬಿ.ಎಸ್ಸಿ, ಬಿ.ಸಿ.ಎ, ಎಂ.ಎ, ಎಂ.ಕಾಂ, ಎಂ.ಬಿ.ಎ, ಎಂ.ಎಲ್.ಐ.ಎಸ್ಸಿ, ಎಂ.ಎಸ್ಸಿ. ಪ್ರೋಗ್ರಾಮ್ ಸ್ನಾತಕ/ಸ್ನಾತಕೋತ್ತರ ಪದವಿಗಳಿಗೆ ಹಾಗೂ ಪಿಜಿ ಡಿಪ್ಲೊಮೋ / ಡಿಪ್ಲೊಮೋ /ಸರ್ಟಿಫಿಕೇಟ್ ಕೋರ್ಸ್ ಅಧ್ಯಯನ ವಿಷಯಗಳಿಗೆ ಸಂಬಂಧಿಸಿದಂತೆ ಈಗಾಗಲೇ ಪ್ರವೇಶಾತಿ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಯಾವುದೇ ದಂಡ ಶುಲ್ಕವಿಲ್ಲದೇ ಅರ್ಜಿ ಸಲ್ಲಿಸಲು ಮಾ.31 ರಂದು ಅಂತಿಮ ದಿನಾಂಕವಾಗಿರುತ್ತದೆ. ಬಿ.ಇಡಿ, ಶಿಕ್ಷಣ ಕ್ರಮದ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮಾ.15 ರಂದು ಅಂತಿಮ ದಿನ ವಾಗಿರುತ್ತದೆ. ಬಿ.ಇಡಿ, ಶಿಕ್ಷಣ ಕ್ರಮದ ಸಾಮಾನ್ಯ ಪ್ರವೇಶ ಪರೀಕ್ಷೆಯ ಪರಿಷ್ಕತ ದಿನಾಂಕ ಮಾ.20 ರಂದು ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್ ಸೈಟ್ www.ksoumysuru.ac.in ಅಥವಾ ಮೊ.ನಂ. 8095939359, 9916009318, 9008905457 ಕರೆ ಮಾಡಿ ಸಂಪರ್ಕಿಸಬಹುದು ಅಥವಾ ಪ್ರಾದೇಶಿಕ ಕೇಂದ್ರ ಕಛೇರಿಗೆ ಖುದ್ದು ಭೇಟಿ ನೀಡಿ ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪ್ರಾದೇಶಿಕ ನಿರ್ದೇಶಕ ಡಾ. ವಿಜಯ್ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.