ಪೊಲೀಸ್ ಇಲಾಖೆಯಲ್ಲಿ ಶೇ.33ರಷ್ಟು ಮಹಿಳಾ ಪ್ರಾತಿನಿಧ್ಯ ನೀಡಿ: ಕೇಂದ್ರ ಸರ್ಕಾರ ಸಲಹೆ
ನವದೆಹಲಿ: ರಾಜ್ಯಗಳು ಪೊಲೀಸ್ ಇಲಾಖೆಯಲ್ಲಿ ಶೇ.33ರಷ್ಟು ಮಹಿಳಾ ಪ್ರಾತಿನಿಧ್ಯ ನೀಡುವಂತೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.
ದೇಶದ ಪ್ರತಿ ಪೊಲೀಸ್ ಠಾಣೆಗಳಲ್ಲೂ ಕನಿಷ್ಠ ಮೂವರು ಮಹಿಳಾ ಸಬ್‌ಇನ್‌ಸ್ಪೆಕ್ಟರ್ ಹಾಗೂ 10 ಮಂದಿ ಮಹಿಳಾ ಕಾನ್‌ಸ್ಟೇಬಲ್‌ಗಳು ಇರಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಈ ಮೂಲಕ 24X7 ಮಹಿಳಾ ಸಹಾಯವಾಣಿ ಕಾರ್ಯನಿರ್ವಹಿಸುವಂತೆ ಆಗಬೇಕು ಎಂದು ಸಚಿವ ನಿತ್ಯಾನಂದ ರೈ ಹೇಳಿದ್ದಾರೆ.
ಪೊಲೀಸ್ ಪಡೆಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಶೇ 33ಕ್ಕೆ ಏರಿಸಬೇಕು ಎಂದು ರಾಜ್ಯಗಳಿಗೆ ಕೇಂದ್ರವು ಆರು ಬಾರಿ ಸಲಹೆ ನೀಡಿದೆ. ಆದರೆ, 2022 ಜ.1ರ ಮಾಹಿತಿ ಪ್ರಕಾರ ಮಹಿಳಾ ಪ್ರಾತಿನಿಧ್ಯವು ಶೇ 11.75ರಷ್ಟು ಮಾತ್ರ ಇದೆ ಎಂದು ರೈ ಬುಧವಾರ ರಾಜ್ಯಸಭೆಗೆ ಬುಧವಾರ ಮಾಹಿತಿ ನೀಡಿದರು.