ಟಿಕೆಟ್ ಕೊಡುವುದು ವರಿಷ್ಠರ ನಿರ್ಧಾರ ಯಾರಿಗೆ ಟಿಕೆಟ್ ಎಂಬುದು ಸಿಎಂಗೂ ಗೊತ್ತಿಲ್ಲ: ಸಿದ್ದೇಶ್ವರ

Giving tickets is the decision of seniors, not even the CM knows who gets the tickets: Siddeshwar

ಟಿಕೆಟ್ ಕೊಡುವುದು ವರಿಷ್ಠರ ನಿರ್ಧಾರ

ದಾವಣಗೆರೆ: ವಿಧಾನಸಭಾ ಚುನಾವಣೆಗೆ ರಾಷ್ಟ್ರೀಯ ನಾಯಕರಿಂದ ಟಿಕೆಟ್ ಘೋಷಣೆ ಆಗಬೇಕು. ಅವರು ಯಾರಿಗೆ ಟಿಕೆಟ್ ನೀಡುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಮುಖ್ಯಮಂತ್ರಿಗಳಿಗೂ ಗೊತ್ತಿಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಪಕ್ಕದಲ್ಲಿ ಇದೇ 25ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುವ ಸಮಾವೇಶ ಸ್ಥಳದ ಸಿದ್ಧತೆ ವೀಕ್ಷಿಸಿ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

ಚುನಾವಣಾ ಘೋಷಣೆ ನಂತರ ಕೋರ್ ಕಮಿಟಿ ಸಭೆ ನಡೆದು ನಂತರವೇ ಟಿಕೆಟ್ ಘೋಷಣೆ ಮಾಡಲಾಗುತ್ತದೆ ಎಂದು ಹೇಳಿದರು.

ಈಗಾಗಲೇ ಸೋಮಣ್ಣ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋಗಲ್ಲ ಎಂದು ಹೇಳಿದ್ದಾರೆ. ಹಾಗೆಯೇ ಬಿಜೆಪಿ ಬಿಟ್ಟು ಯಾರೂ ಕಾಂಗ್ರೆಸ್ ಸೇರುವುದಿಲ್ಲ ಎಂದು ಸಂಸದರು ಹೇಳಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!