ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಲಿ : ಡಾ ವೈ ವಿಜಯಕುಮಾರ್
ದಾವಣಗೆರೆ :ವಿದ್ಯಾರ್ಥಿಗಳು ಕೈಗಾರಿಕೆಗಳಿಗೆ ಬೇಕಾದ ಉದ್ಯೋಗ ಕೌಶಲ್ಯ ಮತ್ತು ಸ್ಪರ್ಧಾತ್ಮಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ . ವೈ . ವಿಜಯಕುಮಾರ್ ತಿಳಿಸಿದರು .
ಜೆಎಂಐಟಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದಲ್ಲಿ ಮೂರನೇ ಸಮಿಸ್ಟರ್ ವಿದ್ಯಾರ್ಥಿಗಳಿಗೆ ನಡೆದ ” ಇಂಡಕ್ಷನ್ ಪ್ರೋಗ್ರಂ ‘ ಉದ್ಘಾಟಿಸಿ ಮಾತನಾಡಿದ ಅವರು
ವಿದ್ಯಾರ್ಥಿಗಳು ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ತಮ್ಮ ಬುದ್ಧಿಮಟ್ಟ ಮತ್ತು ಕೈಗಾರಿಕೆಗಳಿಗೆ ಬೇಕಾದ ಉದ್ಯೋಗ ಕೌಶಲ್ಯತೆ ಮತ್ತು ಸ್ಪರ್ಧಾತ್ಮಕ ಕೌಶಲ್ಯತ ಗಳನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು .ಮುಖ್ಯ ಅತಿಥಿಗಳಾಗಿ ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗದ ಹಳೆಯ ವಿದ್ಯಾರ್ಥಿನಿ , ಕುಮಾರಿ ಸೌಮ್ಯ ಎಸ್ ಯಲ್ಲಿ ಮಾತನಾಡಿ , ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ಅನುಕೂಲತೆಗಳು ಇದ್ದು , ಅವುಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಮತ್ತು ಪ್ರಾರಂಭದಿಂದಲೇ ಶಿಕ್ಷಣಕ್ಕೆ ಒತ್ತು ನೀಡಿ ಒಳ್ಳೆಯ ಅಂಕಗಳನ್ನು ಗಳಿಸುವುದರ ಮೂಲಕ ಕಂಪನಿಗಳಿಗೆ ಅರ್ಹತೆಯನ್ನು ಪಡೆಯಬೇಕೆಂದು ಕಿವಿಮಾತು ಹೇಳಿದರು
. ಇದೇ ವೇಳೆ ತಮಗೆ ಸರಿಯಾದ ಮಾರ್ಗದರ್ಶನ ನೀಡಿದ ಹಲವು ಅಧ್ಯಾಪಕರು ಗಳನ್ನು ನೆನೆದರು . ಕಾಲೇಜಿನ ಡೀನ್ ಅಕಾಡೆಮಿಕ್ಸ್ ಮತ್ತು ಇನ್ಸಾರ್ಮಶನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ . ಬಿ.ಎಸ್ ಸುನಿಲ್ ಕುಮಾರ್ ಮಾತನಾಡಿ , ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಿಗೆ ಹಲವು ಅವಕಾಶಗಳಿದ್ದು , ಸರಿಯಾದ ಸಮಯ ಪುಶ್ನೆ ಮತ್ತು ಕೌಶಲ್ಯತೆ ಗಳ ಮೂಲಕ ಅವುಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು .
ವಿಭಾಗದ ಮುಖ್ಯಸ್ಥರಾದ ಡಾ . ಎಂ ಬಿ ಸಂಜಯ್ ಪಾಂಡ ವಿದ್ಯಾರ್ಥಿಗಳನ್ನು ಮೂರನೇ ಸೆಮಿಸ್ಟರ್ ಗೆ ಬರ ಮಾಡಿಕೊಳ್ಳುವುದರ ಮೂಲಕ ಎಲ್ಲಾ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು .ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಕುಮಾರಿ ದೀಪ ಜಿ . ಬಿ , ಸ್ವಾಗತ ಭಾಷಣವನ್ನು ವಿಭಾಗದ ಅಧ್ಯಾಪಕಿ ಯಾದ ಕಾವ್ಯಶ್ರೀ ಪಿ , ಮುಕ್ತಾಯ ಭಾಷಣವನ್ನು ವಿಭಾಗದ ಅಧ್ಯಾಪಕರಾದ ಶ್ರೀ ರುದ್ರೇಶ್ , ಸಿ ಮತ್ತು ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಸುಚಿತ್ರ ಹಿರೇಗೌಡರ್ ನಡೆಸಿಕೊಟ್ಟರು . ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ . ಮೈ ವಿಜಯ್ ಕುಮಾರ್ , ಡಾ ಸುನಿಲ್ ಕುಮಾರ್ ಬಿ ಎಸ್ , ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್ . ವಿಭಾಗದ ಫಾಲ್ಕನ್ ಫೋರಂ ಸಂಯೋಜಕರಾದ ಶ್ರೀ ಮಾರುತಿ ಎಸ್ ಟಿ , ವಿಭಾಗದ ಅಧ್ಯಾಪಕರುಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು .