Gmit Best Leader:ಜಿ ಎಂ ಐ ಟಿ ಉದ್ಯೋಗ ವಿಭಾಗದ ಮುಖ್ಯಸ್ಥ ತೇಜಸ್ವಿ ಕಟ್ಟೀಮನಿಗೆ ‘ಅತ್ಯುತ್ತಮ ನಾಯಕತ್ವ’ ಪ್ರಶಸ್ತಿ

IMG-20210904-WA0011

 

ದಾವಣಗೆರೆ: ಜಿಎಂಐಟಿ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ತೇಜಸ್ವಿ ಕಟ್ಟಿಮನಿ ಟಿ.ಆರ್ ಅವರಿಗೆ ಫ್ಯೂಲ್ ( Fuel ) ಫೌಂಡೇಶನ್ ವತಿಯಿಂದ ಈ ವರ್ಷದ ‘ಅತ್ಯುತ್ತಮ ನಾಯಕತ್ವ’ ಪ್ರಶಸ್ತಿ ದೊರೆತಿದೆ.

ಪುಣೆ ಮೂಲದ ಪ್ರತಿಷ್ಠಿತ ಫ್ರೆಂಡ್ಸ್ ಯೂನಿಯನ್ ಫಾರ್ ಇನರ್ಜೈಸಿಂಗ್ ಲೈವ್ (Friends Union for Energising lives) ಫೌಂಡೇಶನ್ ವತಿಯಿಂದ ಈ ವರ್ಷದ ಅತ್ಯುತ್ತಮ ನಾಯಕತ್ವ ಪ್ರಶಸ್ತಿ ಮತ್ತು ಜೆಎಂಐಟಿ ಕಾಲೇಜಿಗೆ ‘ಬೆಸ್ಟ್ ಕಾಲೇಜ್ ಪಾರ್ಟಿಸಿಪೇಷನ್’ ಮತ್ತು ‘ಬೆಸ್ಟ್ ಲಿಂಕ್ಸ್ ಇನ್ ಪ್ರೊಫೈಲ್’ ಪ್ರಶಸ್ತಿ ಲಭಿಸಿದೆ.

ಜಿಎಂಐಟಿ ಕಾಲೇಜಿನ ಇಂಜಿನಿಯರಿಂಗ್ ವಿಭಾಗದಿಂದ ಮುನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ತಾಂತ್ರಿಕ ಕೋರ್ಸ್‌ಗಳಾದ ಲಿಂಕಡಿನ್ ಲರ್ನಿಂಗ್ ಕೋರ್ಸಸ್ ಮತ್ತು ಕೋರ್ಸೇರ ಕೋರ್ಸಸ್‌ಗಳನ್ನು ತೆಗೆದುಕೊಂಡು ತಾಂತ್ರಿಕ ಬುದ್ಧಿಮಟ್ಟವನ್ನು ಹೆಚ್ಚಿಸಿಕೊಂಡಿದ್ದು, ಕೋರ್ಸ್ ಪ್ರಮಾಣಪತ್ರವನ್ನು ಪಡೆದಿದ್ದಾರೆ . ಈ ಎಲ್ಲಾ ಬೆಳವಣೆಗೆಗಳಿಗೆ ಸಹಕರಿಸಿದ ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿ ಆರ್ ಅವರಿಗೆ ಈ ಪ್ರಶಸ್ತಿ ಸಂದಿದೆ.

Leave a Reply

Your email address will not be published. Required fields are marked *

error: Content is protected !!