ಜಿ ಎಂ ಐ ಟಿ ಕಾಲೇಜಿನ 25 ವಿದ್ಯಾರ್ಥಿಗಳು ಟಿ ಸಿ ಎಸ್ ಕಂಪನಿಗೆ ಆಯ್ಕೆ

ದಾವಣಗೆರೆ: ಇತ್ತೀಚಿಗೆ ನಡೆದ ಟಿಸಿಎಸ್ ಕಂಪನಿಯ ಸಂದರ್ಶನದಲ್ಲಿ, ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ 25 ವಿದ್ಯಾರ್ಥಿಗಳು ಆಯ್ಕೆಯಾಗಿ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ.
ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿಭಾಗದಿಂದ 11 ವಿದ್ಯಾರ್ಥಿಗಳು, ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗದಿಂದ 7 ವಿದ್ಯಾರ್ಥಿಗಳು, ಇನ್ಫಾರ್ಮಶನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದಿಂದ 5 ವಿದ್ಯಾರ್ಥಿಗಳು, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಿಂದ ಒಬ್ಬ ವಿದ್ಯಾರ್ಥಿ ಮತ್ತು ಬಯೋಟೆಕ್ನಾಲಜಿ ವಿಭಾಗದಿಂದ ಒಬ್ಬ ವಿದ್ಯಾರ್ಥಿ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಕೊನೆಯ ವರ್ಷದ ಹಲವು ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ಆಯ್ಕೆಯಾಗಿದ್ದು, ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಇತ್ತೀಚಿಗೆ ನಡೆದ ವಿಪ್ರೋ ಕಂಪನಿಯ ಮೊದಲನೇ ಸುತ್ತಿನ ಸಂದರ್ಶನದಲ್ಲಿ 55 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಮುಂದಿನ ಸಂದರ್ಶನವನ್ನು ಎದುರುನೋಡುತ್ತಿದ್ದಾರೆ.
ಅದೇ ರೀತಿ ಐಬಿಎಂ ಕಂಪನಿಯು ದಿನಾಂಕ 18ನೇ ಸೋಮವಾರದಂದು ಮೊದಲನೇ ಸುತ್ತಿನ ಸಂದರ್ಶನವನ್ನು ನಡೆಸಿದ್ದು, ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ.
ಇದೇ ತಿಂಗಳಿನಲ್ಲಿ ಕಂಪನಿಗಳಾದ ಎನ್ ಟಿಟಿ ಡಾಟಾ, ಸೋನಾಟಾ ಸಾಫ್ಟ್ವೇರ್, ಎಂಪೋಸಿಸ್, ಕರಿಯರ್ ಲ್ಯಾಬ್, ಆಟೋಸ್ ಸಿಂಟೆಲ್, ರಕುತೆನ್ ಗ್ರೂಪ್,ಡಿಎಕ್ಸ್ಸಿ ಟೆಕ್ನೋಲಜಿಸ್ ಹತ್ತು ಹಲವು ಕಂಪನಿಗಳು ಸಂದರ್ಶನವನ್ನು ನಡೆಸಲಿದ್ದು, ವಿದ್ಯಾರ್ಥಿಗಳು ಅದಕ್ಕೆ ಬೇಕಾದ ತಯಾರಿಯನ್ನು ನಡೆಸುತ್ತಿದ್ದಾರೆ ಎಂದು ಪ್ರಾಂಶುಪಾಲರಾದ ಡಾ. ವೈ ವಿಜಯಕುಮಾರ್ ತಿಳಿಸಿದ್ದಾರೆ.
ಕಾಲೇಜಿನಲ್ಲಿ ಸಂದರ್ಶನಕ್ಕೆ ಬೇಕಾದ ತಯಾರಿಯ ತರಬೇತಿಯನ್ನು ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ವಿಭಾಗಗಳ ಹಲವು ವಿದ್ಯಾರ್ಥಿಗಳು ಕಂಪನಿಗಳಿಗೆ ಆಯ್ಕೆಯಾಗಲಿದ್ದಾರೆಂದು ಕಾಲೇಜಿನ ಆಡಳಿತಾಧಿಕಾರಿ ಶ್ರೀ. ವೈ ಯು ಸುಭಾಶ್ಚಂದ್ರ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಚೇರ್ಮನ್ ಶ್ರೀ ಜಿ ಎಂ ಲಿಂಗರಾಜು, ಆಡಳಿತಾಧಿಕಾರಿಗಳಾದ ಶ್ರೀ. ವೈ ಯು ಸುಭಾಶ್ಚಂದ್ರ, ಪ್ರಾಂಶುಪಾಲರಾದ ಡಾ.ವೈ ವಿಜಯಕುಮಾರ್, ವಿವಿಧ ವಿಭಾಗಗಳ ಮುಖ್ಯಸ್ಥರು ಗಳು, ಅಧ್ಯಾಪಕ ವರ್ಗದವರು ಅಭಿನಂದನೆಯನ್ನು ತಿಳಿಸಿದ್ದಾರೆ.