ಜಿಎಂಐಟಿ ಯಲ್ಲಿ ಎಂಬಿಎ- ಪಿಜಿಸಿಇಟಿ ತರಬೇತಿ ಉದ್ಘಾಟನಾ ಸಮಾರಂಭ
ದಾವಣಗೆರೆ: ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದಿಂದ ಪಿಜಿಸಿಇಟಿ ಗೆ ಒಂದು ವಾರದ ಉಚಿತ ತರಬೇತಿ ಕಾರ್ಯಕ್ರಮವನ್ನು ಅರ್ಹ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿತ್ತು.
ಎಂಬಿಎ ಕೋರ್ಸಿಗೆ ಸೇರಬಯಸುವ ಅರ್ಹ ವಿದ್ಯಾರ್ಥಿಗಳಿಂದ ನೊಂದಣಿಯನ್ನು ಮಾಡಿಕೊಳ್ಳುವುದರ ಮೂಲಕ ಅವರುಗಳಿಗೆ ಒಂದು ವಾರದ ಉಚಿತ ತರಬೇತಿ ಕಾರ್ಯಕ್ರಮವನ್ನು ದಿನಾಂಕ 25 ನೇ ಅಕ್ಟೋಬರ್ ನಿಂದ 30 ನೇ ಅಕ್ಟೋಬರ್ ವರೆಗೂ ಹಮ್ಮಿಕೊಳ್ಳಲಾಗಿದೆ. ಒಟ್ಟು 60ಕ್ಕೂ ಹೆಚ್ಚು ಎಂಬಿಎ ಸೇರಬಯಸುವ ಅರ್ಹ ಪದವಿ ವಿದ್ಯಾರ್ಥಿಗಳು ನೊಂದಣಿಯನ್ನು ಮಾಡಿಸಿಕೊಂಡಿದ್ದಾರೆ. ಈ ಉಚಿತ ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ದಿನಾಂಕ 25ನೇ ಅಕ್ಟೋಬರ್ ರಂದು ಎಂಬಿಎ ವಿಭಾಗದ ಆಡಿಟೋರಿಯಂ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ. ವೈ ವಿಜಯಕುಮಾರ್, ಅರ್ಹ ಪದವಿ ವಿದ್ಯಾರ್ಥಿಗಳು ಉಚಿತ ತರಬೇತಿಯ ಲಾಭವನ್ನು ಪಡೆದು ಪಿಜಿಸಿಇಟಿ ನಲ್ಲಿ ಉತ್ತಮ ಅಂಕಗಳನ್ನು ಗಳಿಸುವುದರ ಮೂಲಕ ಎಂಬಿಎ ಕೋರ್ಸಿಗೆ ಪ್ರವೇಶಾತಿ ಪಡೆದು ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು. ಎಂಬಿಎ ವಿಭಾಗದ ಮಾರ್ಗದರ್ಶಕರಾದ ಡಾ. ಬಕ್ಕಪ್ಪ ಬಿ ಮಾತನಾಡಿ, ಈ ಐದು ದಿನಗಳ ಕಾರ್ಯಕ್ರಮದಲ್ಲಿ ಹಲವು ವಿಷಯಗಳ ಬಗ್ಗೆ ತರಬೇತಿಯನ್ನು ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ್ ಬಿ ಆರ್ ಮಾತನಾಡಿ, ಹಲವಾರು ಸಂಪನ್ಮೂಲ ವ್ಯಕ್ತಿಗಳು ತರಬೇತಿಯನ್ನು ನಡೆಸಿಕೊಡಲಿದ್ದು, ಪಿಜಿಸಿಇಟಿ ಪೂರ್ವ ಸಿದ್ಧತೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ವೈ ವಿಜಯಕುಮಾರ್, ಎಂಬಿಎ ವಿಭಾಗದ ಮಾರ್ಗದರ್ಶಕರಾದ ಡಾ. ಬಿ ಬಕ್ಕಪ್ಪ, ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್, ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ್ ಬಿ ಆರ್, ವಿಭಾಗದ ಅಧ್ಯಾಪಕರು ಗಳಾದ ಡಾ. ರವಿಕುಮಾರ್ ಸಿ, ಡಾ. ಗುರುರಾಜ್ ಜಿ ಪಿ, ಶ್ರೀ ವಿನಯ್ ಐ ಮತ್ತು ಆಕಾಂಕ್ಷಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.