ಸೋನಾಟಾ ಸಾಫ್ಟ್ವೇರ್ ಕಂಪನಿ ಗೆ ಜಿಎಂಐಟಿ ವಿದ್ಯಾರ್ಥಿಗಳು ಆಯ್ಕೆ ಜಿಎಂಐಟಿ: ಸೋನಾಟಾ ಸಾಫ್ಟ್ವೇರ್ ಕ್ಯಾಂಪಸ್ ಸಂದರ್ಶನದಲ್ಲಿ ಜಿಎಂಐಟಿ ವಿದ್ಯಾರ್ಥಿಗಳು ಆಯ್ಕೆ
ದಾವಣಗೆರೆ : ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ಸೋನಾಟಾ ಸಾಫ್ಟ್ವೇರ್ ಕಂಪನಿಯ ಸಂದರ್ಶನ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಅಂತಿಮವಾಗಿ ಐದು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಎಂಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ಮೊದಲ ಬಾರಿ ಸೋನಾಟಾ ಸಾಫ್ಟ್ವೇರ್ ಕಂಪನಿಯು ನಡೆಸಿದ ಈ ಸಂದರ್ಶನ ಪ್ರಕ್ರಿಯೆಯಲ್ಲಿ ಇನ್ಫಾರ್ಮಶನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ನಾಲ್ಕು ವಿದ್ಯಾರ್ಥಿಗಳು ಮತ್ತು ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಒಬ್ಬ ವಿದ್ಯಾರ್ಥಿ ಆಯ್ಕೆಯಾಗಿದ್ದಾರೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್ ತಿಳಿಸಿದ್ದಾರೆ.
ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಚೇರ್ಮನ್ ಆದ ಶ್ರೀ ಜಿಎಂ ಲಿಂಗರಾಜು, ಆಡಳಿತಾಧಿಕಾರಿ ಶ್ರೀ ಸುಭಾಷ್ ಚಂದ್ರ ವೈ ಯು, ಇನ್ಫಾರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ ಸುನಿಲ್ ಕುಮಾರ್ ಬಿ ಎಸ್ , ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಶ್ರೀ ಸಂತೋಷ್ ಕುಮಾರ್ ಎಂ, ವಿವಿಧ ವಿಭಾಗಗಳ ಮುಖ್ಯಸ್ಥರುಗಳು ಮತ್ತು ಅಧ್ಯಾಪಕ ವರ್ಗದವರು ಅಭಿನಂದಿಸಿದ್ದಾರೆ.
ಪ್ರತಿಷ್ಠಿತ ಕಂಪನಿಗಳಾದ ಜೆಪಿ ಮಾರ್ಗನ್, ಸೀಮೆನ್ಸ್, ಅಕಾರ್ಡ ಸಾಫ್ಟ್ ವೇರ್, ತಯಾನ ಸಾಫ್ಟ್ವೇರ್, ಆಪ್ಟಂ ಸೊಲ್ಯೂಷನ್ಸ್, ಜೆ ಎಸ್ ಡಬ್ಲ್ಯೂ, ಎಸಿಸಿ ಸಿಮೆಂಟ್ಸ್, ಮೇದಿನಿ ಆಟೋದೆಸ್ಕ್, ಕಿರ್ಲೋಸ್ಕರ್ ಪೆರಸ್, ಶಿಲ್ಪ ಮೆಡಿಕೇರ್, ಏಸಲ್ ಟೆಕ್ನಾಲಜೀಸ್, ಎಪಿಸೋರ್ಸ್, ಇನ್ನೂ ಮುಂತಾದ ಹಲವು ಕಂಪನಿಗಳು ಸರದಿಯಲ್ಲಿದ್ದು, ಹೆಚ್ಚಿನ ಉದ್ಯೋಗವಕಾಶವನ್ನು ನೀಡಲಾಗುವುದು ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್ ತಿಳಿಸಿದ್ದಾರೆ.