ಗೋವಿನ ಕಾಲಿಗೆ ಹುಳು ಬಿದ್ದು ನರಳುತ್ತಿದ್ದ ಕರುವನ್ನ ರಕ್ಷಿಸಿದ ಗೋರಕ್ಷಕ.!

ದಾವಣಗೆರೆ: ಬಿಜೆಪಿಯವರು ಗೋರಕ್ಷಕರು ಎಂಬ ಮಾತಿಗೆ ಪುಷ್ಟಿನೀಡುವಂತೆ ಬಿಜೆಪಿ ದಕ್ಷಿಣ ಯುವ ಮೋರ್ಚಾದ ಕಾರ್ಯಕರ್ತರು ಸಾಕ್ಷಿಕರಿಸಿದ್ದಾರೆ!
ಹೌದು, ಇಲ್ಲಿನ ಭಗತ್ ಸಿಂಗ್ ನಗರದ ಬಳಿ ಕರುವೊಂದರ ಕಾಲಿಗೆ ಹುಳುಬಿದ್ದು ನರಳುತ್ತಿರುವ ಬಗ್ಗೆ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಧಾವಿಸಿ, ಅದಕ್ಕೆ ಪ್ರಥಮ ಚಿಕಿತ್ಸೆ ನೀಡಿರುವುದು ಎಲ್ಲರ ಗಮನಸೆಳೆದಿದೆ.
ಬಿಜೆಪಿ ದಕ್ಷಿಣ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಭಜರಂಗಿ ನೇತೃತ್ವದ ತಂಡವು ಗೋವಿನ ಕರುವಿಗೆ ಪ್ರಥಮ ಚಿಕಿತ್ಸೆ ನೀಡಿ, ಅದಕ್ಕೆ ಅಪಾಯದಿಂದ ಪಾರು ಮಾಡಿ ಮಾನವೀಯತೆ ಮೆರೆದಿದೆ.
ಇಲ್ಲಿಗಾಗಲೇ ಈ ತಂಡ ಸುಮಾರು ನೂರಾರು ಗೋವುಗಳನ್ನು ರಕ್ಷಿಸಿ, ಆಸರೆ ನೀಡಿದ್ದು, ಸಂದರ್ಭ ಬಂದಾಗೆಲ್ಲ ಅವುಗಳನ್ನು ಯರಗುಂಟೆ ಬಳಿಯಲ್ಲಿರುವ ಸ್ವಂತ ಸ್ಥಳದಲ್ಲಿ ಉಪಚರಿಸಿ, ಅವುಗಳು ಗುಣಮುಖವಾದ ತರುವಾಯ ಅವುಗಳನ್ನು ಬಿಟ್ಟುಕಳಿಸಲಾಗಿದೆ ಎನ್ನುತ್ತಾರೆ ರಾಕೇಶ್ ಬಜರಂಗಿ.
ಇಂದು ಬೆಳಿಗ್ಗೆ ಭಗತ್ ಸಿಂಗ್ ನಗರ ನಿವಾಸಿಯೊಬ್ಬರು ಕರೆ ಮಾಡಿ ತಿಳಿಸಿದ್ದರಿಂದ ತಕ್ಷಣವೇ ನಮ್ಮ ತಂಡ ಅಲ್ಲಿಗೆ ಧಾವಿಸಿ ಹಸುವಿಗೆ ಪ್ರಥಮ ಚಿಕಿತ್ಸೆ ನೀಡಿದೆವು. ಈಗಾಗಲೇ ನಮ್ಮ ಸಂಗಡಿಗರೊಂದಿಗೆ ನೂರಾರು ಕರುಗಳನ್ನು ಉಳಿಸುವ ಕೆಲಸ ಮಾಡಿದ್ದೇವೆ. ರೋಗಗಳಿಂದ ಬಳಲುತ್ತಿರುವ ಹಸುಗಳಿಗೆ ಪಶು ವೈದ್ಯರಿಂದ ಚಿಕಿತ್ಸೆ ಕೊಡಿಸಿ ಅವುಗಳ ಜೀವವನ್ನು ಕಾಪಾಡುವ ಕೆಲಸ ಮಾಡುತ್ತಿದ್ದೇವೆ ಎಂದರು.
ಎಲ್ಲಿಯೇ ಹಸುಗಳು ಹೀಗೆ ರೋಗದಿಂದ ನರಳುತ್ತಿದ್ದರೆ ನಮಗೆ ಕರೆ ಮಾಡಿದರೆ ಅವುಗಳನ್ನು ಕಾಪಾಡುತ್ತೇವೆ ಮೊ.
7815005424 ಈ ಸಂಖ್ಯೆಗೆ ಕರೆ ಮಾಡಿ ಎನ್ನುತ್ತಾರೆ ರಾಕೇಶ್ ಬಜರಂಗಿ.