ಗೋಹತ್ಯ ಹಾಗೂ ಅಕ್ರಮ ಕಸಾಯಿಖಾನೆ ಬಂದ್ ಮಾಡಿಸಿ: ಹಿಂದು ಜಾಗರಣ ವೇದಿಕೆ
ದಾವಣಗೆರೆ: ಹಿಂದೂ ಜಾಗರಣ ವೇದಿಕೆ ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ ಗೋಹತ್ಯ ಹಾಗೂ ಅಕ್ರಮ ಕಸಾಯಿಖಾನೆ ಬಂದ್ ಮಾಡಿಸುವಂತೆ ಆಗ್ರಹಿಸಿ ನಗರಪಾಲಿಕೆ ಆಯುಕ್ತರಿಗೂ ಹಾಗೂ ಅಪಾರ ಜಿಲ್ಲಾಧಿಕಾರಿಗಳಿಗೆ ಮನವಿ.
ಈಗಾಗಲೇ ರಾಜ್ಯ ಸರ್ಕಾರ ತನ್ನ ಸ್ಪಷ್ಟ ನಿರ್ಧಾರದೊಂದಿಗೆ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಿದೆ ಹಾಗೂ ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಕೂಡ ಕಟ್ಟುನಿಟ್ಟಿನ ಅಧಿಕಾರವನ್ನು ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರವನ್ನು ನೀಡಿದೆ.
ಆದರೂ ಸಹ ದಾವಣಗೆರೆ ಜಿಲ್ಲೆಯಲ್ಲಿ ಗೋಹತ್ಯಾ ಅಕ್ರಮ ಕಸಾಯಿಖಾನೆಗಳು. ಕಾರ್ಯನಿರ್ವಹಿಸುತ್ತಿದ್ದು ಕಾನೂನಿಗೆ ರಾಜ್ಯ ಸರ್ಕಾರ ವರ್ಷದ ಮುಚ್ಚಿದೆ ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಗೋವುಗಳ ಮಾರಣಹೋಮ ದಾವಣಗೆರೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಎಗ್ಗಿಲ್ಲದೆ ನಡೆದಿದೆ ಅಲ್ಲದೆ ದಾವಣಗೆರೆ ನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿದಿನ ನೂರಾರು ಗೋವುಗಳ ವಧೆ ಆಗುತ್ತಿದ್ದು ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ನಗರ ಪಾಲಿಕೆ ಆಯುಕ್ತರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನಗರ ಪಾಲಿಕೆ ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿಂದು ಜಾಗರಣ ವಿಭಾಗದ ಕಾರ್ಯದರ್ಶಿಸತೀಶ್ ಪೂಜಾರ್,ಶಿವಾಜಿರಾವ್,ವಿಶ್ವನಾಥ್,ಗಣೇಶ್, ವೀರೇಶ್, ಚೇತನ್,ಅಚ್ಚುತ್, ಅಣ್ಣೇಶ್ ಸಂತೋಷ ಮೃತ್ಯುಂಜಯ ಇತರರು ಇದ್ದರು.