ರಾಜಕಾರಣದಲ್ಲಿ ತಳಮಳ ಮೂಡಿಸಿದ ಗೂಳಿಹಟ್ಟಿ ಪತ್ರ.! 22,200 ಕೋಟಿ ರೂ ಜಲಸಂಪನ್ಮೂಲ ಕಾಮಗಾರಿ ಅಕ್ರಮ.!

gulihatty shekar letter on knnl tender

ಬೆಂಗಳೂರು: ಜಲಸಂಪನ್ಮೂಲ ಇಲಾಖೆಯ 22,200 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂಬ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರ ಆರೋಪ ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ.

ರಾಜ್ಯ ಬಿಜೆಪಿ ಸರ್ಕಾರದ ಶಾಸಕ ಹಾಗೂ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೂಳಿಹಟ್ಟಿ ಶೇಖರ್ ಅವರು ಆರೋಪಿಸಿದ್ದಾರೆ ಎಂದು ಟ್ವೀಟ್ ಮಾಡಿರುವ ಜೆಡಿಎಸ್, ಸರ್ಕಾರದ ಹಾಡು-ಪಾಡಿನ ಬಗ್ಗೆ ನಿಮ್ಮವರೆ ಪ್ರಮಾಣಪತ್ರ ಕೊಟ್ಟಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಕೆಣಕಿದೆ.

ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಪಾರದರ್ಶಕತೆ ಕಾಪಾಡಿಕೊಳ್ಳದೇ, ಕೆಲವೇ ದಿನಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಕಾಮಗಾರಿಗಳ ಟೆಂಡರ್ ಪೂರ್ಣಗೊಳಿಸಲಾಗಿದೆ. ಇದೇನು ಸರ್ಕಾರವೊ ಅಥವಾ ಕಾಳಸಂತೆ ವ್ಯಾಪಾರವೊ? ಇದು ನೀಚತನದ ಪರಮಾವಧಿ ಅಲ್ಲವೆ? ಕೇವಲ ಒಂದು ಇಲಾಖೆಯ ಕತೆಯೇ ಹೀಗಿದೆ ಎಂದು ಜೆಡಿಎಸ್ ಬಣ್ಣಿಸಿದೆ‌

ಬೇಲಿಯೇ ಎದ್ದು ಹೊಲ ಮೇಯುವ ಹಾಗೆ, ಸರ್ಕಾರವೇ ಮುಂದೆ ನಿಂತು ಇಂತಹ ಅಕ್ರಮಗಳನ್ನು ನಡೆಸುತ್ತಿರುವುದಕ್ಕೆ ಇದಕ್ಕಿಂತ ಪ್ರಬಲ‌ ಸಾಕ್ಷಿ ಇನ್ನೇನು ಬೇಕು? ಇಂತಹ ಅಯೋಗ್ಯರಿಗೆ ಅಧಿಕಾರ ಕೊಟ್ಟ ನಾಡಿನ‌ ಜನತೆ ಈಗ ಬರುವ ಚುನಾವಣೆಗೆ ಕಾಯುತ್ತಿದ್ದಾರೆ.  ಜನತೆ ಈ ದುರಾಡಳಿತಕ್ಕೆ ಪೂರ್ಣವಿರಾಮ ಇಡಲಿದ್ದಾರೆ ಎಂದು ಜೆಡಿಎಸ್ ಹೇಳಿದೆ‌

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!