ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಬೋರ್ ಇದ್ದರೂ ಪೈಪಿನ ವ್ಯವಸ್ಥೆ ಇಲ್ಲದೆ ನೀರಿನ ಸಮಸ್ಯೆ

ಬೋರ್ ಇದ್ದರೂ ಪೈಪಿನ ವ್ಯವಸ್ಥೆ
ಚಿತ್ರದುರ್ಗ: ಚಿತ್ರದುರ್ಗ ನಗರದ ಮಧ್ಯಭಾಗದಲ್ಲಿರುವ ಪ್ರತಿಷ್ಠಿತ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ದಿನನಿತ್ಯ ನೀರಿನ ಸಮಸ್ಯೆಯಾಗಿ ಪರದಾಡುವಂಥಾಗಿದೆ. ಕಾಲೇಜಿನ ಆವರಣದಲ್ಲಿ ಬೋರ್ವೆಲ್ ಇದ್ದರೂ ಸಹ ಬೋರ್ವೆಲ್ ಗೆ ವಿದ್ಯುತ್ತಿನ ಸಂಪರ್ಕ ಕಲ್ಪಿಸದೆ ಹಾಗೂ ಬೋರ್ವೆಲ್ನಿಂದ ಕಟ್ಟಡಕ್ಕೆ ನೀರಿನ ಪೈಪ್ ಅನ್ನು ವ್ಯವಸ್ಥೆ ಮಾಡದೆ ಇರುವುದರಿಂದ ಅಲ್ಲಿ ನೀರಿನ ಸಮಸ್ಯೆ ಅಗಾಧವಾಗಿ ಕಾಡುತ್ತಿದೆ.
ಮಳೆಗಾಲದಲ್ಲಿ ಹೇಗೋ ನೀರಿನ ತೊಟ್ಟಿಗೇ ನೀರು ಬಸಿದು ಬರುತ್ತಿರುವ ನೀರಿನಲ್ಲಿ ಜೀವನ ಸಾಗಿಸುತ್ತಿದ್ದ ಈ ಕಾಲೇಜಿನ ವಿದ್ಯಾರ್ಥಿಗಳು ಈಗ ನೀರಿನ ಬಸುವಿಕೆಯು ನಿಂತು ಹೋಗಿ ಹೊರಗಡೆಯಿಂದ ಟ್ಯಾಂಕರ್ ನಿಂದ ನೀರು ಹಾಕಿಸಿಕೊಳ್ಳುವ ಪರಿಸ್ಥಿತಿ ಬಂದಿದೆ.
ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಎಷ್ಟೇ ಬೇಡಿಕೆ ಇಟ್ಟರು ಸಹ ಸರ್ಕಾರದ ಗಮನ ಇತ್ತ ಹರಿಸದೆ ನೀರಿನ ಸಮಸ್ಯೆಯಿಂದ ಕಾಲೇಜು ಬಳಲುತ್ತಿದೆ .
ಸಾಕಷ್ಟು ಬಾರಿ ನಗರ ಆಡಳಿತದವರಿಗೆ ಜಿಲ್ಲಾಡಳಿತಕ್ಕೆ ಕಾನೂನು ಸೇವ ಪ್ರಾಧಿಕಾರಕ್ಕೆ ದೂರು ನೀಡಿದರು ಸಹ ಇಲ್ಲಿನ ನೀರಿನ ವ್ಯವಸ್ಥೆಯನ್ನು ಸರಿಪಡಿಸಲಾಗಿಲ್ಲ ಹತ್ತರಿಂದ ಹದಿನೈದು ಸಾವಿರ ರೂಪಾಯಿ ಖರ್ಚು ಮಾಡಿ ಬೋರ್ವೆಲ್ನಿಂದ ಕಾಲೇಜಿಗೆ ನೀರಿನ ಪೈಪ್ ಹಾಕಿಸಲಾರದೆ ನಗರಸಭೆಯವರು, ನಗರ ಆಡಳಿತದವರು ತಿರಸ್ಕಾರದಿಂದ ನಡೆದುಕೊಳ್ಳುತ್ತಿರುವುದು ಶೋಚನೀಯ ಎಂದಿದ್ದಾರೆ.
ಯಾವುದಾದರೂ ಅಧಿಕಾರಿಗಳಿಗೆ ದೂರು ನೀಡಿದರೆ ಅವರು ಒಳಗಿಂದೊಳಗೆ ನುಣಿಚಿಕೊಂಡು ನಿಮ್ಮ ಕಾಲೇಜಿನ ಹಣದಲ್ಲೇ ನೀವು ಪೈಪ್ ಹಾಕಿಸಿಕೊಳ್ಳಿ ಎಂದು ತಪ್ಪಿಸಿಕೊಳ್ಳುವಂತಹ ಮನೋಭಾವ ಬದಲಾಗಬೇಕಾಗಿದೆ. ಪ್ರಾಮಾಣಿಕವಾಗಿ ಈ ಕಾಲೇಜಿಗೆ ನೀರಿನ ಸೌಕರ್ಯ ಒದಗಿಸುವಂತಹ ಅಧಿಕಾರಿಗಳು ಮುಂದೆ ಬರಬೇಕಾಗಿದೆ ಎಂದು ವಿದ್ಯಾರ್ಥಿಗಳ ಪರವಾಗಿ ಪೋಷಕರು ಆಗ್ರಹಿಸಿದ್ದಾರೆ.
ಕಾಲೇಜಿನಲ್ಲಿ ಇರುವ ಸ್ವಲ್ಪ ಹಣದಲ್ಲೇ ಕಾಲೇಜಿನ ಡಿ ನೌಕರರಿಗೆ ಸಂಬಳ ಕೊಟ್ಟು ವರ್ಷವನ್ನು ನಿಭಾಯಿಸುವುದೇ ಕಷ್ಟಕರವಾಗಿರುವ ಕಾಲೇಜಿಗೆ, ಸರ್ಕಾರ ಅವರಿಗೊಂದಿಷ್ಟು ನೀರಿನ ಪೈಪ್ ಹಾಕಿಸಿಕೊಟ್ಟು ವ್ಯವಸ್ಥೆ ಮಾಡಬೇಕೆಂದು ಪತ್ರಿಕ ಪ್ರಕಟಣೆ ಮುಖಾಂತರ ಆಗ್ರಹಿಸಿದ್ದಾರೆ.