ಹೊಸ ಮೀಸಲಾತಿ ಪ್ರಕಾರವೇ ಸರ್ಕಾರ ನೇಮಕಾತಿ- ಬಡ್ತಿಗೆ ಆದೇಶ: ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ
ದಾವಣಗೆರೆ : ಉಪಸ್ಥಿತರಿದ್ದರು ಪರಿಶಿಷ್ಟ ಪಂಗಡಕ್ಕೆ ಹೊಸ ಮೀಸಲಾತಿ ಪ್ರಕಾರವೇ ಸರ್ಕಾರಿ ನೇಮಕಾತಿಯಲ್ಲಿ ಹಾಗೂ ಬಡ್ತಿಗೆ ಜನವರಿ 01 ರಿಂದಲೇ ಆದೇಶ ಹೊರಡಿಸಲಾಗಿದೆ. ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಆಯೋಜಿಸಿರುವ ಶ್ರೀಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವಾದ ಅಂಗವಾಗಿ ಜನಜಾಗೃತಿ ಜಾತ್ರಾ ಮಹೋತ್ಸದ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರಧಾನ ಮಾಡಿ ಮಾತಾನಾಡಿದ ಅವರು ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ.15 ರಿಂದ 17 ಹಾಗೂ ಪರಿಶಿಷ್ಟ ಪಂಗಡ ಮೀಸಲಾತಿಯನ್ನು ಶೇ.೩ ರಿಂದ ೭ಕ್ಕೆ ಹೆಚ್ಚಿಸಲಾಗಿದೆ. ಮೀಸಲಾತಿ ಹೆಚ್ಚಳದಿಂದ ಮುಂದಿನ ಯುವ ಪೀಳಿಗೆಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಅನುಕೂಲವಾಗಲಿದೆ. ಇದೊಂದು ಪರಿವರ್ತನೆಯಾಗಿದೆ. ಕಾನೂನು ತೊಡಕು ಆಗದಂತೆ ಸರಿಯಾದ ವ್ಯವಸ್ಥೆ ಮಾಡಲಾಗಿದೆ. ಮೀಸಲಾತಿ ಹೆಚ್ಚಳಕ್ಕೆ ಪ್ರಯಮಾಣಿಕ ಪ್ರಯತ್ನ ಮಾಡಿದ್ದೇನೆ. ನೊಂದವರ ಪರವಾಗಿ ವರದಿ ನೀಡಿದ ನ್ಯಾಯಮೂರ್ತಿ ನಾಗಮೋಹನ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮೀಸಲಾತಿ ಹೆಚ್ಚಳಕ್ಕೆ ಮುಂದಿನ ದಿನಗಳಲ್ಲಿ ಯಾವುದೇ ಕಾನೂನಿನ ತೊಡಕು ಉಂಟಾಗಂದತೆ ಮತಷ್ಟು ಕಾನೂನಿನ ಬಲ ನೀಡಲು ಸಂವಿದಧಾನದ ಷಡ್ಯೂಲ್ 9ಕ್ಕೆ ಸೇರಿಸುವ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸದೆ ಖಂಡಿತವಾಗಿಯೂ ಈ ಕೆಲಸ ಮಾಡುತ್ತೆವೆೆ ಎಂದು ಹೇಳಿದರು.
ಪರಿಶಿಷ್ಟ ಪಂಗಂಡಕ್ಕೆ ಮೀಸಲಾತಿ ಅಷ್ಟೇ ಅಲ್ಲ ಈ ಸಮುದಾಯದ ಅಭಿವೃದ್ದಿಗಾಗಿ ಪ್ರತ್ಯೇಕವಾಗಿ ಪರಿಶಿಷ್ಟ ಪಂಗಡ ಅಭಿವೃದ್ದಿ ಇಲಾಖೆ ಸೃಷ್ಠಿಸಲಾಗಿದೆ. ಈ ವರ್ಗಕ್ಕೆ 75 ಯುನಿಟ್ ಉಚಿತ ವಿದ್ಯುತ್, ಜಮೀನು ಖರೀದಿಗೆ ರೂ.25 ಲಕ್ಷ, ಅನುದಾನ ಮನೆ ನಿರ್ಮಾಣಕ್ಕೆ ರೂ. 2 ಲಕ್ಷ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ವಿದ್ಯಾರ್ಥಿ ನಿಲಯಗಳ ಪ್ರವೇಶ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ಹಾಗೂ ವಿದ್ಯಾರ್ಥಿನಿಲಯಗಳ ಶುಲ್ಕ ಹೆಚ್ಚಿಸಲಾಗಿದೆ. ಯುವಕರಿಗೆ ಸ್ವಯಂ ಉದ್ಯೋಗಕ್ಕೆ ಅವಕಾಶ ಕಲ್ಲಿಸಲಾಗಿದೆ ಈ ಎಲ್ಲ ಯೋಜನೆಗಳಿಗೆ ನಮ್ಮ ಸರ್ಕಾರ ದೊಡ್ಡ ಮಟ್ಟದ ಅನುದಾನ ನೀಡಿ ಈ ಸಮುದಾಯದ ಜೊತೆಗೆ ನಿಂತಿದೆ ಎಂದರು.
ಮದಕರಿ ದಿಟ್ಟ ನಾಯಕ : ವಾಲ್ಮೀಕಿ ಸಮುದಾಯಕ್ಕೆ ಒಳ್ಳೆಯ ಭವಿಷ್ಯ ಹಾಗೂ ಬೆಳಕು ಇದೆ. ಈ ಸಮಾಜವನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ವಿಜಯನಗರ ಸಾಮ್ರಾಜ್ಯ ರಕ್ಷೆ ಮಾಡಿದ ಸಮಾಜ, ನಾಯಕರಾಗಿ ಆಳಿದ ಸಮಾಜ. ಮದಕರಿನಾಯಕ ಇಡಿ ಕರ್ನಾಟಕ ಇತಿಹಾಸಲ್ಲಿ ದಿಟ್ಟ ನಾಯಕ. ಹೈದರಾಲಿಯ ಸೈನ್ಯವನ್ನು ಹಿಮ್ಮೆಟ್ಟಿದ ಹಾಗೂ ಔರಂಗಜೇಬನ ದಾಳಿಯನ್ನು ತಡೆಹಿಡಿದ ನಾಯಕ ಎಂದು ಬಣ್ಣಿಸಿದರು.
ವಿಶ್ವದ ಶ್ರೇಷ್ಠ ಗ್ರಂಥ: ಮಹರ್ಷಿ ವಾಲ್ಮೀಕಿ ಅವರು ರಚಿಸಿ ರಾಮಾಯಣ ಗ್ರಂಥ, ಜಗತ್ತಿನ 10 ಧಾರ್ಮಿಕ ಗ್ರಂಥಗಳ ಪೈಕಿ ಮೇರು ಗ್ರಂಥವಾಗಿದೆ. ತಂದೆ-ಮಗ, ಅಣ್ಣ-ತಮ್ಮ, ಹಾಗೂ ಗಂಡ-ಹೆಂಡತ ಸಂಬಂಧ ಹೇಗಿರಬೇಕು ದುಷ್ಟ ಶಕ್ತಿಯನ್ನು ಹೇಗೆ ಸಂಹರಿಸಬೇಕು ಎಂದು ತಿಳಿಸುತ್ತಲೇ ಜಗತ್ತಿಗೆ ಮಾನವಿಯ ಸಬಂಧಗಳು ಮಾನವಿಯ ಮೌಲ್ಯಗಳನ್ನು ಸಾರಿದ ಶ್ರೇಷ್ಠ ಕೃತಿ ಎಂದು ಬಣ್ಣಿಸಿದರು.
ವಾಲ್ಮೀಕಿ ಸಮುದಾಯದ ಬೇಡರ ಕಣ್ಣಪ್ಪ ಶ್ರೇಷ್ಠ ಭಕ್ತ, ಶಿವನಿಗೆ ದೃಷ್ಟಿ ನೀಡಿದ ಇತಿಹಾಸವಿದೆ. ಈ ಜನಾಂಗ ಕಷ್ಟದಲ್ಲಿರಬಾರದು. ಈ ಸಮುದಾಯ ಸಶಕ್ತವಾದರೆ ನಾಡು ಹಾಗೂ ದೇಶಕಟ್ಟಲು ಸಾಧ್ಯ ಎಂದು ನಾನು ಬಲವಾಗಿ ನಂಬಿಕೆ ಇಟ್ಟವನು ಎಂದರು.
ನಿಮ್ಮ ಜೊತೆ ನಿಲ್ಲುವೆ: ನಾನು ಬಯಸಿ ಮುಖ್ಯಮಂತ್ರಿಯಾಗಲಿಲ್ಲ, ನಿಮ್ಮ ಹಾಗೂ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ಆಶೀರ್ವಾದದಿಂದ ಸಿಎಂ ಆದವನು. ನಿಮ್ಮ ಆಶೀರ್ವಾದ ಜನರಿಗೆ ಉಪಯೋಗುವ ಹಾಗೂ ಸಮಾಜದ ಹತ್ತು ಹಲವಾರು ಜಟಿಲ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತಿದ್ದೇನೆ. ಈ ಸಮುದಾಯ ನನ್ನ ಸಮುದಾಯ. ನೀವು ನನ್ನ ಜೊತೆಗೆ ಇದ್ದರೆ, ನನ್ನ ಉಸಿರುವರೆಗೆ ನಿಮ್ಮೊಂದಿಗೆ ನಿಲ್ಲುವೆ ಎಂದರು.
ಮಾನ್ಯ ಪ್ರಧಾನಮಂತ್ರಿಗಳು ಈ ಸಮುದಾಯ ಮಹಿಳೆಯನ್ನು ರಾಷ್ಟ್ರಪತಿಮಾಡಿದ್ದಾರೆ. ಈ ಸಮುದಾಯಕ್ಕೆ ಹೆಚ್ಚು ಅನುದಾನ ನೀಡಿದ ಸರ್ಕಾರ ಮೋದಿಜಿ ಅವರ ಸರ್ಕಾರ ಎಂದು ಹೇಳಿದರು.
ಸಚಿವ ಮುರುಗೇಶ ನಿರಾಣಿ ಮಾತಾನಾಡಿ ವಾಲ್ಮೀಕಿ ಸಮುದಾಯ ದುಡಿದು ಬದುಕುವ ಸಮುದಾಯ ಈ ಸಮುದಾಯದ ಆರ್ಥಿಕ ಶೈಕ್ಷಣಿಕ ಬೆಳವಣಿಗೆಗೆ ಎಲ್ಲ ನೆರವು ಒದಗಿಸಲಾಗುವುದು ಈ ಸಮಾಜದ ಅಭಿವೃದ್ದಿಗೆ ಕೈಜೊಡಿಸಲಾಗುವುದು ಎಂದರು.
ಸಚಿವ ಆನಂದ್ ಸಿಂಗ್ ಮಾತಾನಾಡಿ, ವಾಲ್ಮೀಕಿ ಸಮಾಜ ನಾನಗೆ ರಾಜಕೀಯವಾಗಿ ಪುನರ್ ಜನ್ಮ ನೀಡಿದ ಸಮಾಜ ನಾವು ಈ ಸಮಾಜದ ಅಭಿವೃದ್ದಿ ಶ್ರಮಿಸುವೆ ಎಂದರು.
ಎನ್ ವೈ ಗೋಪಾಲಕೃಷ್ಣ ಅವರು ತರಳಬಾಳು ಹುಣ್ಣಿಮೆ ಮಾದರಿಯಲ್ಲಿ ಮುಂದಿನ ದಿನಗಳಲ್ಲಿ ವಾಲ್ಮೀಕಿ ಜಯಂತಿಯನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಆಚರಿಸಬೇಕು ಎಂದು ಹೇಳಿದರು.
ಶಾಸಕರಾದ ರಾಜುಗೌಡ, ಹೆಚ್ ವಿ ರಾಮಚಂದ್ರಪ್ಪ, ರೇಣುಕಾಚಾರ್ಯ,ವಿರುಪಾಕ್ಷಪ್ಪ ಬಳ್ಳಾರಿ, ಹಾಗೂ ಮುಖಂಡರಾದ ಹೆಚ್.ವಿ ಬಳೆಗಾರ್, ಈಟ್ಟೆರ್ ಬಸವರಾಜ ನಾಯಕ್, ವಿರೇಶ್ ಹನಗವಾಡಿ, ಹರೀಶ್, ಶ್ರೀನಿವಾಸ್ ದಾಸಕರಿಯಪ್ಪ ಉಪಸ್ಥಿತರಿದ್ದರು.