ಅಕ್ರಮ ಅದಿರು, ಕಲ್ಲು, ಜಲ್ಲಿ, ಮರಳು ಸಾಗಿಸುವ ಲಾರಿಗಳ ಮೇಲೆ ಜಿಪಿಎಸ್ ನಿಗಾ ಯಶಸ್ವಿ – ಎಸ್ ಎಸ್ ಮಲ್ಲಿಕಾರ್ಜುನ
ಬೆಂಗಳೂರು : ಅಕ್ರಮ ಖನಿಜ ಸೇರಿದಂರೆ ಕಲ್ಲು, ಜಲ್ಲಿ, ಮತ್ತು ಮರಳು ಸಾಗಣೆ ಮಾಡುತ್ತಿದ್ದ ಲಾರಿಗಳ ಮೇಲೆ ನಿಗಾವಹಿಸಲಾಗಿದ್ದು, ಸರ್ಕಾರಕ್ಕೆ ಆಗುತ್ತಿದ್ದ ನಷ್ಟವನ್ನು ತಪ್ಪಿಸಲಾಗುತ್ತಿದೆ ಎಂದು ಸಚಿವರಾದ ಎಸ್‍ಎಸ್ ಮಲ್ಲಿಕಾರ್ಜುನ ತಿಳಿಸಿದರು.
ಒನ್ ಸ್ಟೇಟ್ – ಒನ್ ಜಿಪಿಎಸ್ ಯೋಜನೆಯಿಂದ ನಿಯಮ ಉಲ್ಲಂಘಟನೆ ಮಾಡುವಂತ ಲಾರಿಗಳ ಮೇಲೆ ದಂಡ ವಿಧಿಸಲಾಗುತ್ತಿದೆ ಎಂದರು. ಈ ಯೋಜನೆ ಉದ್ದೇಶ ಲಾರಿ ಮಾಲೀಕರು, ಗಣಿ ಮಾಲೀಕರು ಮತ್ತು ಗ್ರಾಹಕರಿಗೆ ಆಗುತ್ತಿದ್ದ ಮೋಸ ತಡೆಯಲು ಈ ಯೋಜನೆ ಜಾರಿಗೆ ತಂದಿದ್ದು ಯಶಸ್ವಿಯಾಗಿದೆ ಎಂದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಎಲ್ಲಾ ಮಾದರಿ ಖನಿಜ- ಉಪ ಖನಿಜ ಸಾಗಿಸುವ ಸಾರಿಗಳ ಮೇಲೆ ನಿಗಾ ವಹಿಸಲು ಜಿಪಿಎಸ್ ಅಳವಡಿಸುವ ಯೋಜನೆ ಜಾರಿಗೆ ತಂದಿತ್ತು. ಇದರಿಂದ ಸಾಕಷ್ಟು ಪ್ರಯೋಜನವಾಗಿದ್ದು, ಸರ್ಕಾರಕ್ಕೂ ಇದರಿಂದ ಲಾಭವಾಗಿದೆ ಎಂದರು,
ಸೋರಿಕೆಯಾಗುತ್ತಿದ್ದ ಆದಾಯಕ್ಕೆ ಕಡಿವಾಣ ಬಿದ್ದಿದೆ ಎಂದರು. ಇನ್ನೂ ಒಂದು ಪರವಾನಗೆ ತೆಗೆದುಕೊಂಡು ಹತ್ತಾರು ಲೋಡ್ ನ್ನು ಅಕ್ರಮ ಸಾಗಿಸುತ್ತಿದ್ದರು, ಇದರಿಂದ ಲಾರೀ ಮಾಲೀಕರು ಮತ್ತು ಗಣಿ ಮಾಲೀಕರಿಗೂ ಕೆಲವೊಮ್ಮ ನಷ್ಟವಾಗುತ್ತಿದ್ದು, ಇದೀಗ ಜಿಪಿಎಸ್ ಅಲವಡಿಕೆಯಿಂದ ಇಲ್ಲಿ ಯಾರಿಗೂ ಮೋಸ ಆಗುವುದಿಲ್ಲ ಎಂದರು. ಲಾರಿ ಮಾಲೀಕರು ಎಲ್ಲೋ ಇರುತ್ತಾರೆ ಯಾವುದೇ ಏಜೆನ್ಸಿ ಅಥವಾ ಕಂಪನಿ ಮೂಲಕ ಟ್ರಾನ್ಸ್‍ಪೋರ್ಟ್ ಮಾಡುತ್ತಿದ್ದರು ಇದೀಗ ಜಿಪಿಎಸ್ ಅಳವಡಿಕೆಯಿಂದ ಲಾರಿ ಮಾಲೀಕರು ಸೇರಿದಂತೆ ಯಾರಿಗೂ ಮೋಸ ಆಗುವುದಿಲ್ಲ ಎಂದರು. ಇದರಿಂದ ಪಾರದರ್ಶಕ ಆದಳಿತ ಮತ್ತು ಗ್ರಾಹಕರಿಗೂ ಅನುಕೂಲ ಕಳ್ಳದಂಧೆಗೆ ಕಡಿವಾಣ ಬಿದ್ದಿದೆ ಎಂದು ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ತಿಳಿಸಿದರು.
ಗಣಿ ಉದ್ಯಮಿಗಳು, ಲಾರಿ ಮಾಲೀಕರು ಮತ್ತು ಗ್ರಾಹಕರಿಗೂ ಇದರಿಂದ ಯಾವುದೇ ಅನ್ಯಾಯವಾಗದಂತೆ ಕ್ರಮವಹಿಸುತ್ತಿದ್ದು, ಸರ್ಕಾರಕ್ಕೂ ಇದರಿಂದ ಆದಾಯ ಕೂಡ ಹೆಚ್ಚಾಗಲಿದೆ ಎಂದರು. ಅಧಿಕಾರಿಗಳು ಸಹ ಈ ಬಗ್ಗೆ ಹೆಚ್ಚು ಗಮನಹರಿಸಿ ಕೆಲಸ ಮಾಡುವಂತೆ ಸೂಚಿಸಿದರು. ಈ ವೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.