“ಪದವಿ ಪೂರ್ವ” ಅತ್ಯುತ್ತಮ ಚಲನಚಿತ್ರವನ್ನು ನಮ್ಮ ಜಿಲ್ಲೆಯವರೇ ನಟಿಸಿ ನಿರ್ಮಿಸಿದ್ದಾರೆ.! ಅದರ ಗೆಲುವಿಗೆ ನಾವುಗಳೇ ಮುನ್ನುಡಿ ಬರೆಯೋಣ.! – ಹರೀಶ್ ಬಸಾಪುರ

ದಾವಣಗೆರೆ: ಚಿತ್ರೋದ್ಯಮ ಎಂದರೆ ಕೇವಲ ರಾಜ್ಯದ ರಾಜಧಾನಿ ಬೆಂಗಳೂರು ಹಾಗೂ ಮಂಡ್ಯ, ಮೈಸೂರು ಭಾಗಗಳಿಗೆ ಸೀಮಿತ ಎಂಬ ಭಾವನೆ ಎಲ್ಲರಿಗೂ ಇಲ್ಲಿಯವರೆಗೂ ಇತ್ತು ಆದರೆ ಅದನ್ನು ಸುಳ್ಳು ಮಾಡುವ ಮೂಲಕ ಅತ್ಯುತ್ತಮ ನಾಯಕ ನಟನಾಗಿ ನಟಿಸಿ, ಚಿತ್ರ ನಿರ್ಮಾಣ ಮಾಡಿರುವ ನಮ್ಮ ಜಿಲ್ಲೆಯವರೇ ಆದ ಪೃಥ್ವಿ ಶಾಮನೂರವರ ಅಭಿನಯಕ್ಕೆ ಹಾಗೂ ಚಿತ್ರಕ್ಕೆ ನೂರಕ್ಕೆ ನೂರು ಅಂಕ.
ಪ್ರತಿಯೊಬ್ಬರ ಜೀವನದಲ್ಲಿ ಪದವಿ ಪೂರ್ವದ ಆ ಎರಡು ವರ್ಷಗಳು ಅವಿಸ್ಮರಣೀಯ, ಪ್ರತಿಯೊಬ್ಬರ ಜೀವನದ ಏಳು ಬೀಳುಗಳು ಆ ಎರಡು ವರ್ಷಗಳ ಮೇಲೆ ನಿಂತಿವೆ ಎಂಬ ಸತ್ಯಕ್ಕೆ ಈ ಚಿತ್ರ ಸಾಕ್ಷಿ.
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷೆಯಿಂದ ಕಣ್ಣು ಕಳೆದುಕೊಳ್ಳುವ ತಾಯಿ, ತಾಯಿಯ ನೋವನ್ನು ಕಂಡು ತನ್ನ ಮಗನನ್ನು ವೈದ್ಯನನ್ನಾಗಿಸಿ ಬಡವರ ಸೇವೆ ಮಾಡುವ ಪಣತೊಡುವ ಮಧ್ಯಮ ವರ್ಗದ ತಂದೆ, ಹುಡುಗಾಟದ ನಡುವೆಯೂ ತನ್ನ ತಂದೆ ತನ್ನ ಮೇಲಿಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ತಲೆಬಾಗಿ… ತನಗೆ ಇಷ್ಟವಿಲ್ಲದಿದ್ದರೂ ತಂದೆಯ ಆಸೆ ತೀರಿಸಲು ವೈದ್ಯನಾಗಬೇಕೆಂದು ಬಯಸುವ ಮಗ, ಪರೀಕ್ಷೆಯ ಪಲಿತಾಂಶ ಬಂದು ಇನ್ನೇನು ಮಗ ವೈದ್ಯನಾಗಿ ಬಿಟ್ಟ ಎಂದು ಸಂತೋಷದಲ್ಲಿರುವ ತಂದೆಗೆ, ಆಸ್ಪತ್ರೆಯಲ್ಲಿ ಪೊಲೀಸ ಅಧಿಕಾರಿ ನಿನ್ನ ಮಗನ ಜೀವ ಆಸ್ಪತ್ರೆಗೆ ಬರುವಷ್ಟರಲ್ಲಿ ಹೋಗಿತ್ತು… ನಿನ್ನೊಂದಿಗೆ ನಾನಿದ್ದೇನೆ ಎಂದು ದುಃಖದಿಂದ ಹೇಳುವಾಗ, ತಂದೆಯ ಪರಿಸ್ಥಿತಿ ಎಂಥವರಲ್ಲೂ ಕಣ್ಣೀರ ಧಾರೆ ಹರಿಸದೆ ಇರಲು ಸಾಧ್ಯವಿಲ್ಲ.
ಸ್ನೇಹದ ಮೌಲ್ಯ, ಮಕ್ಕಳನ್ನು ಪೋಷಕರು ಬೆಳೆಸುವ ರೀತಿ, ಪೋಷಕರು ತಮ್ಮ ತಪ್ಪಿನಿಂದ ಸಮಾಜದಲ್ಲಿ ತಲೆತಗ್ಗಿಸಿದಾಗ, ನೊಂದು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ಮಕ್ಕಳು ಹೀಗೆ ಅನೇಕ ಉತ್ತಮ ಸಂದೇಶಗಳನ್ನು ಸಾರುವ ಚಿತ್ರ ಪದವಿಪೂರ್ವ.
ವಯಸ್ಸಿನ ಮಿತಿ ಇಲ್ಲದೆ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ತನಕ ಪ್ರತಿಯೊಬ್ಬರಿಗೂ, ಒಂದಲ್ಲ ಒಂದು ರೀತಿಯ ಸಂದೇಶ ಸಾರುವ ಈ ಚಿತ್ರದಲ್ಲಿ, ಪ್ರತಿಯೊಬ್ಬ ಕಲಾವಿದರ ನಟನೆ ಅತ್ಯುತ್ತಮವಾಗಿದ್ದು, ಈ ಚಿತ್ರ ರಾಜ್ಯದಲ್ಲಿಯೇ ಯಶಸ್ವಿ ಪ್ರದರ್ಶನ ಕಾಣಲಿ ಎಂದು ಹಾರೈಸುತ್ತಾ, ಜಿಲ್ಲೆಯ ಪ್ರತಿಯೊಬ್ಬರೂ ಚಿತ್ರಮಂದಿರದಲ್ಲಿಯೇ ಚಿತ್ರ ವೀಕ್ಷಿಸೋಣ, ನಮ್ಮ ಜಿಲ್ಲೆಯ ಪ್ರತಿಭೆಯನ್ನು ಬೆಳೆಸೋಣ, ಒಂದಂತೂ ಸತ್ಯ ನೀವು ನೀಡಿದ ಹಣಕ್ಕೆ ಚಿತ್ರತಂಡ ಮನೋರಂಜನೆ ಹಾಗೂ ಉತ್ತಮ ಸಂದೇಶ ಎಂಬ ಬಂಪರ್ ಕೊಡುಗೆ ನೀಡಿದೆ.
ಕೆ.ಎಲ್.ಹರೀಶ್ ಬಸಾಪುರ.
99640-70830.