ಚನ್ನಗಿರಿಯಲ್ಲಿ ನಡೆದ ಭವ್ಯ ಶ್ರೀನಿವಾಸ ಕಲ್ಯಾಣ ಮಹೋತ್ಸವ.

ಚನ್ನಗಿರಿ: ಸಮಾಜದ ಸ್ವಾಸ್ಥ್ಯಕ್ಕಾಗಿ ಪ್ರಾರ್ಥಿಸಿ, ಮಾನ್ಯ ಶಾಸಕರಾದ ಶ್ರೀ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಸಹೋದರ ಶ್ರೀ ಮಾಡಾಳ್ ಮಲ್ಲಿಕಾರ್ಜುನ ಅವರು ಚನ್ನಗಿರಿಯ ತಾಲೂಕು ಕ್ರೀಡಾಂಗಣದಲ್ಲಿ ಅದ್ಧೂರಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಶ್ರೀ ರಾಘವೇಂದ್ರ ಮಠದಿಂದ ಚನ್ನಗಿರಿಯ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ನಂತರ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಆಯೋಜಿಸಿದ್ದ ತಾಲೂಕು ಕ್ರೀಡಾಂಗಣಕ್ಕೆ ಮೆರವಣಿಗೆ ಸಾಗಿತು. ಸಂಜೆ 7.30ರ ಸುಮಾರಿಗೆ ಮಹಾ ಮಂಗಳಾರತಿ ಕಾರ್ಯಕ್ರಮ ನಡೆದು ಪ್ರಸಾದ ವಿನಿಯೋಗ ನಡೆಸಲಾಯಿತು. ಕಾರ್ಯಕ್ರಮಕ್ಕೆ ತಿರುಪತಿ ತಿರುಮಲ ದೇವಸ್ಥಾನದ ಆಗಮಿಕರು ಮತ್ತು ಶ್ರೀ ಎಸ್ ವೆಂಕಟೇಶ್ ಮೂರ್ತಿ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಭಗವಂತನ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, “ಮಹಾವಿಷ್ಣು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಸಮಾಜಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಆಶೀರ್ವಾದ ಪಡೆಯಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಈ ವಿಶೇಷ ಕಾರ್ಯಕ್ರಮಕ್ಕೆ ತಿರುಮಲ ತಿರುಪತಿ ದೇವಸ್ಥಾನದ ಅರ್ಚಕರನ್ನು ಆಹ್ವಾನಿಸಿದ್ದೆವು. ಉತ್ತಮ ಮಳೆಯಾಗಿದ್ದು, ಇಂದು ಕೃಷಿ ಚಟುವಟಿಕೆ ಹೆಚ್ಚಳಕ್ಕೆ ನೆರವಾಗಿದೆ. ಈಗ ನಾವು ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಮತ್ತೊಂದು ಉತ್ತಮ ವರ್ಷಕ್ಕಾಗಿ ಪರಮಾತ್ಮನ ಆಶೀರ್ವಾದವನ್ನು ಕೋರುತ್ತೇವೆ” ಎಂದರು.
ನಾಯ್ಕ ಸಮುದಾಯ, ರಾಜಸ್ಥಾನಿ ಮಾರ್ವಾಡಿ, ಕುರುಬ, ಮೇದಾರ, ದೇವಾಂಗ, ಅಣ್ಣಗಿರಿ ಬಾಲಾಜಿಯ, ಗಂಗಮಠ, ಬಂಜಾರ, ವೀರಶೈವ, ವಿಪ್ರ, ಈಡಿಗ, ಬವಸರ ಕ್ಷತ್ರಿಯರು, ಆದಿ ಕರ್ನಾಟಕ, ಸವಿತಾ, ಭೋವಿ, ದೈವಜ್ಞ, ಆದಿ ದ್ರಾವಿಡ, ಆರ್ಯವೈಶ್ಯ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಿದವು. ವಿಶ್ವಕರ್ಮ, ಡೊಂಬರ, ಜೈನ, ಮಡಿವಾಳ ಮತ್ತು ಯಾದವ ಸಮುದಾಯಗಳು ಸಹ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಒಟ್ಟಿನಲ್ಲಿ ಇದು ಎಲ್ಲರ ಅಭಿವೃದ್ಧಿಗಾಗಿ ಮಾಡಿದ ಕಾರ್ಯಕ್ರಮ.
ಈ ಕಾರ್ಯಕ್ರಮದಲ್ಲಿ ಚನ್ನಗಿರಿ ತಾಲೂಕು ಬಿಜೆಪಿ ಮುಖಂಡರುಗಳಾದ ಗೋಪಿ, ಚನ್ನಗಿರಿ ಬಿಜೆಪಿ ಘಟಕದ ಅಧ್ಯಕ್ಷರು, ಶಿವರಾಜ್ ಉಪ ನಾಯಕನಹಳ್ಳಿ, ಶ್ರೀನಿವಾಸ್ ಚನ್ನಗಿರಿ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷರು, ಸೇರಿದಂತೆ ಸಾವಿರಾರು ಜನ ಬಿಜೆಪಿ ಕಾರ್ಯಕರ್ತರುಗಳು ಹಾಗೂ ಭಕ್ತಾದಿಗಳು ಮತ್ತು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಭಕ್ತಿಯನ್ನು ನೆರವೇರಿಸಿದರು.
ಶಾಸಕ ಮಾಡಳ್ ವಿರೂಪಾಕ್ಷಪ್ಪರವರ ಕುಟುಂಬ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿದ್ದು, ಜನರ ಏಳಿಗೆಗಾಗಿ ಈ ಪೂಜೆಯನ್ನು ಮಾಡಿ ಪ್ರಾರ್ಥನೆ ಸಲ್ಲಿಸಿದರು.
ಚನ್ನಗಿರಿ ತಾಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ಲೋಕಕಲ್ಯಾಣಕ್ಕಾಗಿ ಪೂಜೆಯನ್ನು ಸಲ್ಲಿಸಿದ ವಿಶೇಷ ಕುಟುಂಬವೆಂದರೆ ಅದು ಶಾಸಕ ಮಾಡಳ್ ವಿರುಪಾಕ್ಷಪ್ಪ ನವರ ಕುಟುಂಬವಾಗಿದೆ.