ನಿವೃತ್ತ ಯೋಧರಿಗೆ ಅದ್ಧೂರಿ ಸ್ವಾಗತ: ರೇಣುಕಾಚಾರ್ಯ ನೇತೃತ್ವದಲ್ಲಿ ಮೆರವಣಿಗೆ
ದಾವಣಗೆರೆ: ಗಡಿ ಭದ್ರತಾ ಪಡೆಯಲ್ಲಿ ಕಳೆದ 22 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾಗಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧರನ್ನು ಮೆರವಣಿಗೆ ಮಾಡಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆತ್ಮೀಯವಾಗಿ ಬರ ಮಾಡಿಕೊಂಡರು.
ಹೊನ್ನಾಳಿ ತಾಲೂಕಿನ ನೇರಲಗುಂಡಿ ಗ್ರಾಮದ ಕೃಷ್ಣನಾಯ್ಕ, ಶ್ರೀನಿವಾಸ್ ನಾಯ್ಕ ಈ ಇಬ್ಬರು ಸೈನಿಕರು ಕಳೆದ 22 ವರ್ಷಗಳಿಂದ ಕಾಶ್ಮೀರದಲ್ಲಿ ಸೇವೆಸಲ್ಲಿಸಿ ಇಂದು ನಿವೃತ್ತರಾದ ಹಿನ್ನೆಲೆಯಲ್ಲಿ ತವರಿಗೆ ಆಗಮಿಸಿದರು.
ಯೋಧರನ್ನು ಗ್ರಾಮದಾದ್ಯಂತ ತೆರದ ವಾಹನದಲ್ಲಿ ಯೋಧರ ಮೆರವಣಿಗೆ ಮಾಡಿ ಗ್ರಾಮಸ್ಥರು ಭಾರತಾಂಬೆಯ ಪರ ಘೋಷಣೆ ಕೂಗಿ ಸಂಭ್ರಮಿಸಿ, ಸೈನಿಕರಿಗೆ ಭವ್ಯ ಸ್ವಾಗತ ಕೋರಿದರು.