ದೇಶವಾಸಿಗಳಿಗೆ “ರಾಷ್ಟ್ರೀಯ ಮತದಾರರ ದಿನ” ದ ಶುಭಾಶಯಗಳು – ಎಸ್ ಎಸ್ ಜ್ಯೋತಿಪ್ರಕಾಶ್

Happy "National Voter's Day" to countrymen - SS Jyotiprakash

ಶಿವಮೊಗ್ಗ: “ಮತದಾನ ನಮ್ಮ ಜನ್ಮಸಿದ್ಧ ಹಕ್ಕು, ಮತ ಚಲಾಯಿಸುವುದು ನಮ್ಮ ಆದ್ಯ ಕರ್ತವ್ಯ” – ದೇಶವಾಸಿಗಳಿಗೆ “ರಾಷ್ಟ್ರೀಯ ಮತದಾರರ ದಿನ”ದ ಶುಭಾಶಯಗಳು ಎಂದು ಶಿವಮೊಗ್ಗ ಬಿಜೆಪಿ ಮುಖಂಡರಾದ ಎಸ್ ಎಸ್ ಜ್ಯೋತಿಪ್ರಕಾಶ್ ತಿಳಿಸಿದ್ದಾರೆ.
ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಪ್ರತಿಯೊಬ್ಬ ಪ್ರಜೆಗೂ ಮತದಾನದ ಮೂಲಭೂತ ಹಕ್ಕುನ್ನು ನಮ್ಮ ಸಂವಿಧಾನ ನೀಡಿದೆ. ರಾಷ್ಟ್ರವನ್ನು ಮತ್ತು ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸಲು, ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು, ಶಾಸಕಾಂಗದಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರಲು ತನ್ನ ಇಚ್ಚೆಯ ನಾಯಕನನ್ನು ಆಯ್ಕೆ ಮಾಡುವ ಹಕ್ಕನ್ನು ಶ್ರೀಸಾಮಾನ್ಯನು ಹೊಂದಿರುತ್ತಾನೆ.
ರಾಷ್ಟ್ರೀಯ ಮತದಾರರ ದಿನದ ವಿಷವೇನೆಂದರೆ ನಮ್ಮ ದೇಶದ ಮತದಾರರನ್ನು ಸಬಲೀಕರಣ ಮಾಡುವುದು, ಜಾಗರೂಕರನ್ನಾಗಿಸುವುದು, ಚುನಾವಣೆಯ ಸಮಯದಲ್ಲಿ ದೇಶದ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಈ ಮೂಲಕ ರಾಷ್ಟ್ರದ ಜವಾಬ್ದಾರಿಯುತ ನಾಗರಿಕರಾಗಲು ಅವರಿಗೆ ಸಹಕರಿಸುವುದು ರಾಷ್ಟ್ರೀಯ ಮತದಾರರ ದಿನದ ಪ್ರಮುಖ ಧ್ಯೇಯವಾಗಿದೆ.
ಭಾರತ ಚುನಾವಣಾ ಆಯೋಗ ಸ್ಥಾಪನೆಯಾದ ದಿನವನ್ನು ಸ್ಮರಿಸುವ ಸಲುವಾಗಿ 2011 ರಿಂದ ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಭಾರತದಲ್ಲಿ ಆಚರಿಸಲಾಗುತ್ತದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!