ದಾವಣಗೆರೆ: ಹರಿಹರ ವಿಧಾನಸಭಾ ಕೇತ್ರದ ಹಾಲಿ ಶಾಸಕ S ರಾಮಪ್ಪನವರ ಗೆ ಟಿಕೆಟ್ ತಪ್ಪಿ N H ಶ್ರೀ ನಿವಾಸ್ ಗೆ ಟಿಕೆಟ್ ಸಿಕ್ಕ ಹಿನ್ನಲೆ ಶಾಸಕರ ನಡೆ ,ಯಾವ ಕಡೆ ಇರಬಹುದು ಎಂದು ಕುತೂಹಲದಿಂದ ಕಾಯುತ್ತಿದ್ದ ಹರಿಹರದ ಮತದಾರಿಗೆ ಇಂದು ಶಾಸಕರು ಕಾಂಗ್ರೆಸ್ ಅಭ್ಯರ್ಥಿ N H ಶ್ರೀನಿವಾಸ್ ನಂದಿಗಾವಿಗೆ ಅಧೀಕೃತ ವಾಗಿ ಬೆಂಬಲ ಸೂಚಿಸಿದರು.
ಈ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಹರಿಹರದ ಶಾಸಕ ರಾಮಪ್ಪ,ಹರಿಹರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಂದಿಗಾವಿ ಶ್ರೀನಿವಾಸ್, ಕೆಪಿಸಿಸಿ ವಕ್ತಾರ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರದ ಎಂ. ನಾಗೇಂದ್ರಪ್ಪ ರಾಜನಹಳ್ಳಿ, ಕೆಪಿಸಿಸಿ ವಕ್ತಾರ ರೇವಣಸಿದ್ದಪ್ಪ, ನಗರಸಭೆ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಸದಸ್ಯ ಶಂಕರ್ ಖಟವ್ಕರ್, ಕೃಷ್ಣ ಶಾ ಭೂತೆ ಹಾಗೂ ಕಾಂಗ್ರೆಸ್ ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳು ,ಕಾರ್ಯಕರ್ತರು, ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.
