ಹರಿಹರ ಜಾತ್ರೆ: ಬಲಿ ಕೋಣದ ರಕ್ಷಣೆ

ಹರಿಹರ: ಇಲ್ಲಿನ ಗ್ರಾಮದೇವತೆ ಜಾತ್ರಾ ಮಹೋತ್ಸವದಲ್ಲಿ ದೇವಿಗೆ ಬಲಿ ನೀಡಲು ಬಿಟ್ಟಿದ್ದು ಎನ್ನಲಾದ ಕೋಣವನ್ನು ಸೋಮವಾರ ಸಂಜೆ ಪೊಲೀಸರು ವಶಕ್ಕೆ ಪಡೆದು ರಕ್ಷಣೆ ಮಾಡಿದ್ದಾರೆ. ದೇವರ ಹೆಸರಿನಲ್ಲಿ ಪ್ರಾಣಿ ಬಲಿಯನ್ನು ಹೈಕೋರ್ಟ್ ಆದೇಶದಂತೆ ನಿಷೇಧ ಮಾಡಿದ ಕಾರಣ ಸೋಮವಾರ ಡಿವೈಎಸ್‌ಪಿ ಬಸವರಾಜ್‌ನಾಯ್ಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕೋಣವನ್ನು ಪತ್ತೆ ಹಚ್ಚಿ ಸೆರೆಹಿಡಿದರು. ಕೋಣವನ್ನು ನಗರ ಪೊಲೀಸ್ ಠಾಣೆಯ ಆವರಣದಲ್ಲಿ ಕಟ್ಟಿ ಹಾಕಲಾಗಿದೆ.

ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಮಾತನಾಡಿ, ‘ಯಾವ ದೇವ, ದೇವತೆಯೂ ಪ್ರಾಣಿ ಬಲಿ, ಬಹಿರಂಗ ಬೇವಿನ ಉಡುಗೆ ಬೇಡುವುದಿಲ್ಲ. ಇದೆಲ್ಲಾ ಮೂಢನಂಬಿಕೆ. ಪ್ರಾಣಿ ಬಲಿ ನೀಡದೆ ಕುಂಕುಮ ಬಳಸಿ ಅಥವಾ ಶಿರಸಿ ಮಾರಿಕಾಂಬಾ ದೇವಿ ಜಾತ್ರೆಯ ಮಾದರಿಯಲ್ಲಿ ಕೋಣದ ದೇಹದಿಂದ ಅಲ್ಪ ರಕ್ತ ಪಡೆದೂ ಹಬ್ಬದಾ ಚರಣೆ ಮಾಡಲು ಅವಕಾಶವಿದೆ. ಅಮಾಯಕ ಪ್ರಾಣಿಗಳನ್ನು ಧರ್ಮದ ಹೆಸರಲ್ಲಿ ಕ್ರೂರವಾಗಿ ಕೊಲ್ಲಬೇಡಿ’ ಎಂದು ಮನವಿ ಮಾಡಿದರು.ಡಿವೈಎಸ್‌ಪಿ ಬಸವರಾಜ್ ನಾಯ್ಕ್, ಸಿಪಿಐ ಸತೀಶ್‌ಕುಮಾರ್ ಯು., ಪಿಎಸ್‌ಐ ಸುನೀಲ್ ಕುಮಾರ್ ತೇಲಿ ಹಾಗೂ ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!