ಟಿಕೆಟ್ ಕೊಡಿಸಿ, ಇಲ್ಲವೇ ನೀವೇ ಸ್ಪರ್ಧಿಸಿ ಸಿದ್ದರಾಮಯ್ಯಗೆ ಹರಿಹರ ಶಾಸಕ ರಾಮಪ್ಪ ಮನವಿ

ಬೆಂಗಳೂರು: ಕಾಂಗ್ರೆಸ್‌ನ 3ನೇ ಪಟ್ಟಿಯಲ್ಲೂ ತಮಗೆ ಟಿಕೆಟ್ ಸಿಗದ ಕಾರಣ ಹರಿಹರ ಶಾಸಕ ಎಸ್.ರಾಮಪ್ಪ ಅವರು ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ, ಟಿಕೆಟ್ ಕೊಡಿಸುವಂತೆ ಕೇಳಿದ್ದಾರೆ.
ಇದೇ ಸಂದರ್ಭದಲ್ಲಿ ಹರಿಹರ ಕ್ಷೇತ್ರದಿಂದ ತಾವು ಸ್ಪರ್ಧೆ ಮಾಡಬೇಕೆಂದೂ ಸಹ ಸಿದ್ದರಾಮಯ್ಯ ಅವರಿಗೆ ಒತ್ತಡ ಹಾಕಿರುವ ಅವರು, ನನಗಾದರೂ ಟಿಕೆಟ್ ಕೊಡಿ, ಇಲ್ಲವಾದರೆ ನೀವಾದರೂ ಸ್ಪರ್ದಿಸಿ. ನೀವು ಸ್ಪರ್ಧಿಸಿದರೆ ಐವತ್ತು ಸಾವಿರ ಮತಗಳಿಂದ ನಿಮ್ಮನ್ನು ಗೆಲ್ಲಿಸುತ್ತೇವೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿರುವ ರಾಮಪ್ಪ, ಕಾಂಗ್ರೆಸ್‌ನ 4ನೇ ಪಟ್ಟಿಯಲ್ಲಿ ನನ್ನ ಹೆಸರು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಟಿಕೆಟ್ ವಿಚಾರವಾಗಿ ಸಾಹೇಬ್ರಿಗೆ (ಸಿದ್ದರಾಮಯ್ಯ) ಹೇಳಿದ್ದೇನೆ. ಸರ್ವೇ ಸಮೀಕ್ಷೆಯಲ್ಲಿ ನನ್ನ ಹೆಸರೇ ಇದೆ. ನನಗೆ ಟಿಕೆಟ್ ಮಿಸ್ ಆಗಲು ಸಾಧ್ಯವೇ ಇಲ್ಲ. ಟಿಕೆಟ್ ವಿಳಂಬಕ್ಕೆ ಕಾರಣ ಇದೆ. ಅದನ್ನು ಮುಂದಿನ ದಿನದಲ್ಲಿ ಹೇಳುತ್ತೇನೆ ಎಂದು ಹೇಳಿದರು.
ಹರಿಹರದಲ್ಲಿ ಸ್ಪರ್ಧಿಸುವಂತೆ ಸಿದ್ಧರಾಮಯ್ಯ ಅವರಿಗೆ ಆಹ್ವಾನಿಸಿರುವುದಾಗಿ ರಾಮಪ್ಪ ಹೇಳಿದರು.