ಹರಿಹರ ಪೈರ್ ಸ್ಟೇಷನ್ ಅಧಿಕಾರಿ ಸುಹಾಸ್ ಲೋಕಾಯುಕ್ತ ಬಲೆಗೆ
ದಾವಣಗೆರೆ: ಚಿತ್ರಮಂದಿರದ ಅಗ್ನಿ ನಿಯಂತ್ರಣ ಉಪಕರಣದ ರಿನಿವಲ್ ಸಂಬಂಧ ಎನ್.ಓ.ಸಿ. ನೀಡಲು ಚಲನಚಿತ್ರ ಚಿತ್ರಮಂದಿರ ಮಾಲೀಕರಿಂದ ಲಂಚದ ಹಣ ಪಡೆಯುತ್ತಿದ್ದ ಹರಿಹರದ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿಯನ್ನು ದಾವಣಗೆರೆ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲಂಚದ ಹಣಕ್ಕೆ ಬೇಡಿಕೆ ಇಟ್ಟ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕು ಫೈರ್ ಸ್ಟೇಷನ್ ಆಫೀಸರ್ (ಎಫ್.ಎಸ್.ಓ) ಸುಹಾಸ್ ಇವರು ತಮ್ಮ ಅಧೀನ ಸಿಬ್ಬಂದಿ ಮೆಸ್ ಇನ್‌ಚಾರ್ಜ್ ಚಂದ್ರು ಮೂಲಕ ಲಂಚದ ಹಣ ಪಡೆಯುವಾಗ ಟ್ರ್ಯಾಪ್ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.
ಹರಿಹರದ ತಾಲೂಕಿನ ಮಲೆಬೆನ್ನೂರು ಗ್ರಾಮದ ಜ್ಯೋತಿ ಚಿತ್ರಮಂದಿರದ ಮಾಲೀಕರಾದ ಟಿ.ಡಿ.ಅರುಣ್ ಇವರು, ತಮ್ಮ ಚಿತ್ರಮಂದಿರದ ಫೈರ್ ಸೇಫ್ಟಿಗೆ ಸಂಬಂಧಿಸಿದಂತೆ ಎನ್ ಓಸಿ ನೀಡಲು ಹರಿಹರದ ಅಗ್ನಿ ಶಾಮಕ ಠಾಣೆಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಹರಿಹರದ ತಾಲ್ಲೂಕು ಫೈರ್ ಸ್ಟೇಷನ್ ಆಫೀಸರ್ (ಎಫ್.ಎಸ್.ಓ) ಸುಹಾಸ್ ಅವರು ಅರುಣ್ ಅವರಿಗೆ ಕಿಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ ಎನ್ ಓಸಿ ಕೊಡಲು 5 ಸಾವಿರ ರೂ.ಗಳಿಗೆ ಒಪ್ಪಿಕೊಂಡಿದ್ದರು.
ಅದರಂತೆ ಸೋಮವಾರ ಅರುಣ್ ಅವರಿಂದ 5ಸಾವಿರ ಲಂಚದ ಹಣ ಪಡೆಯುವಾಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಲಂಚದ ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.
ದಾವಣಗೆರೆ ಲೋಕಾಯುಕ್ತ ಘಟಕದ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪುರ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಕೆ.ಜಿ.ರಾಮಕೃಷ್ಣ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿಗಳಾದ ಹೆಚ್.ಎಸ್.ರಾಷ್ಟ್ರಪತಿ, ಎನ್.ಹೆಚ್.ಆಂಜನೇಯ, ವೀರೇಶಯ್ಯ ಎಸ್.ಎಂ, ಎನ್.ಆರ.ಚಂದ್ರಶೇಖರ, ಆಂಜನೇಯ.ವಿ.ಹೆಚ್, ಸುರೇಶ್.ಎಂ.ರಾಣೇಬೆನ್ನೂರು, ಶಿವಾಜಿ.ಎಂ, ಧನರಾಜ್.ಎನ್, ಲಿಂಗೇಶ್.ಎಸ್.ಎನ್, ಮುಜೀಬ್ ಖಾನ್, ಬಸವರಾಜ.ಡಿ, ಬಸವರಾಜ.ಸಿ.ಎಸ್, ಮೋಹನ್ ಕುಮಾರ್.ಪಿ. ಕೃಷ್ಣನಾಯ್ಕ ಅವರೊಂದಿಗೆ ಟ್ರ್ಯಾಪ್ ಕಾರ್ಯಾಚರಣೆ ನಡೆಸಿ ಟ್ರ್ಯಾಪ್ ಮಾಡಿ ದಸ್ತಗಿರಿ ಮಾಡಲಾಗಿದ್ದು ತನಿಖೆ ಮುಂದುವೆರೆದಿದೆ ಎಂದು ಲೋಕಾಯುಕ್ತ ಎಸ್ ಪಿ ತಿಳಿಸಿದ್ದಾರೆ.