ಹೇ ತುಚ್ಛ ಮನಸ್ಥಿತಿಯ ಮನುಜ.! ಈ ಮಹಾ ಪುರುಷರ ಅಗಲಿಕೆಯ ಕಂಬನಿ ಮಿಡಿಯುವ ನಾಟಕ ಏತಕ್ಕೆ ಆಡುವೆ.!? – ಪವನ್ ರೇವಣಕರ್

ದಾವಣಗೆರೆ: ಪರಮ ಪೂಜ್ಯ ಶ್ರೀ ಸಿಧ್ಧಗಂಗಾ ಪ್ರಭುಗಳು, ತಮ್ಮ ಜೀವನುದ್ದಕ್ಕೂ ಅನ್ನ ದಾಸೋಹದೊಂದಿಗೆ, ಅಕ್ಷರ ದಾಸೋಹವನ್ನು ಲಕ್ಷಾಂತರ ಮಕ್ಕಳಿಗೆ ಧಾರೆ ಎರೆದು, ನಮ್ಮ ನಡುವೆ ನಡೆದಾಡುವ ದೈವರಾದರು.
ಡಾ.ಪುನಿತ್ ರಾಜಕುಮಾರ್ ಚಲನ ಚಿತ್ರ ನಟರಾದರೂ, ಕೇವಲ ಮನುರಂಜನೆ ನೀಡುವುದನ್ನೆ ತಮ್ಮ ಬದುಕನ್ನಾಗಿಸದೆ, ಪ್ರಚಾರ ಗಿಟ್ಟಿಸಿಕೊಳ್ಳದೆ ಅನಾಮದೇಯವಾಗಿ ಬಡವರ ಬಾಳಿನ ಸಂಕಷ್ಟ ಹರನಾಗಿ, ಸಾರ್ಥಕ ಬದುಕನ್ನ ಬದುಕಿದವರು.
ಅದೇ ರೀತಿ, ಶತಮಾನಗಳಿಗೊಮ್ಮೆ ರಾಷ್ಟ್ರ ಧರ್ಮದ ರಕ್ಷಣೆಗಾಗಿ, ವೀರ ಸಪೂತನನ್ನ ಜನ್ಮ ನೀಡಲು, ಶತಮಾನದ ಮಾಹಾನ್ ರಾಟ್ಟ್ರ ಮಾತಾ, ಮಾನ್ಯ ಪ್ರಧಾನಿ ನರೇಂದ್ರ ಮೊದಿಜಿ ರವರ ಪೂಜ್ಯ ಮಾತಾ ಹೀರಾ ಬೇನ್, ಮಕ್ಕಳಿಗೆ ಆಸ್ಥಿ ಮಾಡದೆ, ತನ್ನ ಪರಿಶ್ರಮ ಮತ್ತು ಪರಿಶುಧ್ಧ ಬದುಕಿನ ಸಂಸ್ಕಾರಗಳಿಂದ, ತನ್ನ ಮಗನನ್ನೆ ರಾಷ್ಟ್ರದ ಆಸ್ಥಿ ಮಾಡಿ ತೋರಿಸಿದರು.
ಇಂದು, ನಮ್ಮನ್ನ ಅಗಲಿದ ಮಹಾನ್ ತತ್ವಜ್ಞಾನ ಯೋಗಿ, ಮುನುಷ್ಯನಾಗಿ ಹುಟ್ಟಿದರೂ, ದೈವಿಗುಣಗಳನ್ನು ಸಾಧಿಸಿಕೊಂಡವರು, ಜ್ಞಾನಯೋಗಿ ಶ್ರೀ ಸಿಧ್ಧೇಶ್ವರ ಪ್ರಭುಗಳಿಗೆ, ಅವರ ಕೋತ್ಯಾಂತರ ಭಕ್ತರು, ಪ್ರಪಂಚದ ಎಲ್ಲಾ ಐಭೋಗಗಳನ್ನು, ಇವರ ಪಾದ ಚರಣಗಳಲ್ಲಿ ಧಾರೆ ಎರೆಯಲು ಸಿಧ್ಧದಿದ್ದರೂ, ಒಂದು ಅಣುವಷ್ಟೂ ಆಸೆಗಳನ್ನ ಬೆಳೆಸಿಕೊಳ್ಳದೆ, ಅತ್ಯಂತ ನಿಶ್ಕಲ್ಮಶ ಹಾಗು ಪರಿಶುಧ್ಧ ತಪಸ್ವೀಯಂತದ ಬದುಕನ್ನ ನಡೆಸಿ, ಕರ್ಮಯೋಗಿಗಳು.
ಈ ಎಲ್ಲಾ ಪರಮಾತ್ಮರರು, ತಮ್ಮ ಬದುಕು ಮತ್ತು ಅಂತ್ಯದಲ್ಲಿ ಸಾರಿದ ನಿಸ್ವಾರ್ಥ, ಸರಳ, ಪರೋಪಕಾರದ, ಬಡವರ ಬಾಳನ್ನು ಬೆಳಗುವ ಇವರ ಬದುಕಿನಲ್ಲಿ ನೀಡಿದ ಸಂದೇಶದಲ್ಲಿ ಕನಿಷ್ಟ 0.1% ನಮ್ಮ ಜೀವಗಳಲ್ಲಿ ಅಳವಡಿಸಿ ಕೊಂಡಿದ್ದೇವಾ ಎಂದು ಆತ್ಮಾವಲೋಕನಾ ಮಾಡಿಕೊಳ್ಳಬೇಕಿದೆ.?
ಸುಮ್ಮನೆ ಶ್ರಧ್ಧಾಂಜಲಿಯ ಸಂದೇಶಗಳನ್ನು ಮುಂದೆ ಕಳಿಸುತ್ತಾ, ಅವರ ಭಾವಚಿತ್ರಗಳನ್ನು ಮನೆಯ ಗೋಡೆಯ ಮೇಲೆ ನೇತುಹಾಕಿ, status ನಲ್ಲಿ ಹಾಕುತ್ತಾ, ಏನು ಸಾಧಿಸುತ್ತಿರುವಿರಯ್ಯಾ.?
ಈ ಪ್ರಶ್ನೆಗಳು ನನಗೆ ಕಾಡುತ್ತಿವೆ.
ಇಂತಿ ನಿಮ್ಮ
ಪವನ್ ರೇವಣಕರ್
ಯುವ ಸಂಕಲ್ಪ ಪ್ರತಿಷ್ಠಾನ.