ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪು ಐತಿಹಾಸಿಕ – ಆಂದೋಲಾಶ್ರೀ
ಕಲಬುರಗಿ : ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ ನೀಡಿರುವ ತೀರ್ಪು ಐತಿಹಾಸಿಕವಾಗಿದೆ.ಹಿಜಾಬ್ ವಿರುದ್ಧ ಹೋರಾಟದಿಂದ ಶಿವಮೊಗ್ಗದ ಹರ್ಷ ಪ್ರಾಣ ತ್ಯಾಗ ಮಾಡಿದ್ದಾರೆ.ಹರ್ಷನ ಆತ್ಮಕ್ಕೆ ಇವತ್ತು ಈ ತೀರ್ಪಿನಿಂದ ಶಾಂತಿ ಸಿಕ್ಕಂತಾಗಿದೆ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷರಾದ ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ ಆದೇಶವನ್ನು ಎಲ್ಲರೂ ಗೌರವ ಮತ್ತು ಆದರದಿಂದ ಪಾಲಿಸಬೇಕು. ಹೈಕೋರ್ಟ ಆದೇಶ ಉಲ್ಲಂಘಿಸಿ ಕುಚೇಷ್ಟೆ ಮಾಡಿದರೆ ಅಂಥವರನ್ನು ಶಾಲೆಯಿಂದ ಒದ್ದು ಹೊರಗೆ ಹಾಕಬೇಕು ಎಂದರು