Hijab Issue High Court Order: ಹಿಜಾಬ್ ವಿವಾದ.! ಎಲ್ಲಾ ಅರ್ಜಿಗಳು ವಜಾ, ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯ.! ಹೈಕೋರ್ಟ್ ಮಹತ್ವದ ತೀರ್ಪು
ಬೆಂಗಳೂರು: ಮಾರ್ಚ್ 15- ಪ್ರತಿಭಟನೆಗಳು, ಆರೋಪ, ಪ್ರತ್ಯಾರೋಪಗಳು ಮತ್ತು ಒಂದರ ಹಿಂದೊಂದು ವಿಚಾರಣೆಗಳ ನಂತರ, ಕರ್ನಾಟಕ ಹೈಕೋರ್ಟ್ ಮಂಗಳವಾರ ಇಂದು ಹಿಜಾಬ್ ಪ್ರಕರಣದ ತೀರ್ಪು ಪ್ರಕಟಿಸಿದೆ. ಹಿಜಾಬ್ ಪರ ದಾಖಲಾಗಿದ್ದ ಎಲ್ಲಾ ಅರ್ಜಿಗಳನ್ನು ವಜಾ ಮಾಡಿ ಕರ್ನಾಟಕ ಹೈಕೋರ್ಟ್ ತೀರ್ಪನ್ನು ನೀಡಿದೆ.
ಸರ್ಕಾರದ ಸಮವಸ್ತ್ರ ಪ್ರಶ್ನೆ ಮಾಡುವಂತಿಲ್ಲ ಎಂದು ಹೈಕೋರ್ಟ್ ವಿಸೃತ ಪೀಠ ಇಂದು ಆದೇಶ ಮಾಡಿದೆ. ಹಿಜಾಬ್ ಧಾರ್ಮಿಕ ಆಚರಣೆಯ ಭಾಗವಲ್ಲ. ಈ ಮೂಲಕ ಸಮವಸ್ತ್ರ ಕಡ್ಡಾಯ ಎಂದು ಮುಖ್ಯ ನ್ಯಾಯ ಮೂರ್ತಿ ಗಳನ್ನೊಲ್ಗೊಂಡ 3 ಜನರ ವಿಸ್ತೃತ ಪೀಠ ಆದೇಶ ಮಾಡಿದೆ.
ರಾಜ್ಯದಲ್ಲಿ ಎದ್ದಿರುವ ಹಿಜಬ್ ವಿವಾದಕ್ಕೆ ಹೈಕೋರ್ಟ್ ತೆರೆ ಎಳೆದಿದೆ. ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿರುವ ಕರ್ನಾಟಕ ಹೈಕೋರ್ಟ್, ಶಾಲೆಗಳಲ್ಲಿ ಸರ್ಕಾರ ಸೂಚಿಸಿರುವ ವಸ್ತ್ರ ಸಂಹಿತೆಯನ್ನು ಪ್ರಶ್ನಿಸುವಂತಿಲ್ಲ ಎಂದಿದೆ. ಈ ಮೂಲಕ ಶಾಲೆಗಳಲ್ಲಿ ಹಿಜಬ್ ಧರಿಸಲು ಅವಕಾಶ ಇಲ್ಲ.
ತೀರ್ಪಿನ ಪ್ರಮುಖ ಅಂಶಗಳು ಹೀಗಿವೆ:
-
ಸಮವಸ್ತ್ರ ಕುರಿತ ಸರ್ಕಾರದ ಆದೇಶ ಸರಿಯಾಗಿದೆ.
-
ವಸ್ತ್ರ ಸಂಹಿತೆ ಕುರಿತಸರ್ಕಾರದ ಆದೇಶ ಸಮರ್ಪಕವಾಗಿದೆ
-
ಹಿಜಬ್ ಕುರಿತ ಶಾಲೆಗಳ ನಿಯಮ ಸಮರ್ಪಕ.
-
ಸಮವಸ್ತ್ರ ನಿಗದಿ ಬಗ್ಗೆ ಶಾಲೆಗಳ ನಿಯಮ ಅಂತಿಮ
-
ಸಮವಸ್ತ್ರ ಕಡ್ಡಾಯ ಕುರಿತ ನಿಯಮವನ್ನು ವಿದ್ಯಾರ್ಥಿಗಳು ವಿರೋಧಿಸುವಂತಿಲ್ಲ.
-
ಹಿಜಾಬ್ ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಲ್ಲ.
-
ಹಿಜಾಬ್ ಧರಿಸಿ ಶಾಲೆಗಳಿಗೆ ತೆರಳವುದು ಸೂಕ್ತವಲ್ಲ.
-
ಶಾಲೆಗಳಲ್ಲಿ ವಿಧ್ಯಾರ್ಥಿಗಳು ಯಾವುದೇ ಧರ್ಮ ವಸ್ತ್ರ ಧರಿಸುವುದು ಸರಿಯಲ್ಲ.