ದಾವಣಗೆರೆಯ ಕೆಟಿಜೆ ನಗರದಲ್ಲಿ ಶಾದಿಮಹಲ್ ನಿರ್ಮಾಣಕ್ಕೆ ಹಿಂದೂ ಜನಜಾಗೃತ ಸಮಿತಿ ವಿರೋಧ.!

IMG-20230205-WA0044

ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯ ಕೆಟಿಜೆ ನಗರದಲ್ಲಿರುವ ಉದ್ಯಾನವನದ/ಮಾರ್ಕೆಟ್ ಮೈದಾನದಲ್ಲಿನ 100×100 ಅಳತೆೆ ಜಾಗದಲ್ಲಿ ಸಾವಿತ್ರಬಾಯಿ ಪುಲೆ ಹೆಸರಿನಲ್ಲಿ ಉದ್ಯಾನವನ ಹಾಗೂ ಮಕ್ಕಳ ಆಟದ ಮೈದಾನ ನಿರ್ಮಿಸುವಂತೆ ಹಿಂದೂ ಜನಜಾಗೃತಿ ಸೇನಾ ಸಮಿತಿ ಒತ್ತಾಯಿಸಿದೆ.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಸಮಿತಿಯ ರಾಜ್ಯಾಧ್ಯಕ್ಷ ಜಿ.ಚೇತನ್, ಈ ಜಾಗವನ್ನು ಶಾದಿ ಮಹಲ್ ನಿರ್ಮಾಣಕ್ಕೆ ಯಾವ ಕಾರಣಕ್ಕೂ ನೀಡಬಾರದು ಎಂದು ಹೇಳಿದರು.
ಈಗಾಗಲೇ ಈ ಜಾಗದಲ್ಲಿ ಐಡಿಎಸ್‌ಎಂಟಿ ಯೋಜನೆಯಡಿ ನಿರ್ಮಿಸಲಾಗಿರುವ ಮಳಿಗೆಗಳ ಪಕ್ಕದಲ್ಲಿ ಖಾಲಿ ಇರುವ 100×100 ಅಡಿ ಸುತ್ತಳತೆ ಜಾಗದಲ್ಲಿ ಶಾದಿ ಮಹಲ್ ನಿರ್ಮಾಣಕ್ಕೆ ಕೋರಿ ಮಸ್ಜಿದ್ ಎ ಖಿಜ್ರಿಯಾ ಇವರು ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳೀಯರ ವಿರೋಧದ ನಡುವೆಯೂ ಮಹಾನಗರ ಪಾಲಿಕೆ ಈ ಜಾಗ ಮಂಜೂರು ಮಾಡಲು ನಿರ್ಮಧಿಸಿದೆ ಎಂದು ಆರೋಪಿಸಿದರು.

ಮಳಿಗೆಗಳ ಸುತ್ತ ಖಾಲಿ ಇರುವ ಜಾಗವನ್ನು ಉದ್ಯಾನವನ, ಮಾರುಕಟ್ಟೆಗೆ ಮೀಸಲಿಡಲಾಗಿದೆ. ಅದಕ್ಕೆ ನೀಡಬೇಕೇ ಹೊರತು, ಪ್ರಾರ್ಥನಾ ಮಂದಿರಕ್ಕೆ ನೀಡಬಾರದು. ಒಂದು ವೇಳೆ ಮಂಜೂರು ಮಾಡಿದ್ದೇ ಆದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಚೇತನ್ ಎಚ್ಚರಿಸಿದರು.

ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರವೂ ಸಹ ಈ ಪ್ರಸ್ತಾವನೆ ನಿರಾಕರಿಸಿದೆ. ಆದರೂ ಪಾಲಿಕೆ ಏಕಪಕ್ಷೀಯವಾಗಿ ಜಾಗ ಮಂಜೂರು ಮಾಡಲು ಮುಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಎಸ್.ಗುರುರಾಜ್, ಮಹಾಂತೇಶ್, ಎಸ್.ನಾಯ್ಕ, ಶಶಾಂಕ್, ವಿಜಯ್, ಷಣ್ಮುಖ ಇತರರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!