ಜಿಲ್ಲಾ ಸಮಾದೆಷ್ಟರ ಕಚೇರಿಯಲ್ಲಿ ಗೃಹರಕ್ಷಕ ದಿನಾಚರಣೆ ಆಚರಣೆ
ದಾವಣಗೆರೆ: ಡಿಸೆಂಬರ್ 24 ರಂದು ಗೃಹರಕ್ಷಕ ದಳ ದಾವಣಗೆರೆ ವತಿಯಿಂದ ಅಖಿಲ ಭಾರತ ಗೃಹರಕ್ಷಕ ದಿನಾಚರಣೆ ಅಂಗವಾಗಿ ಗೃಹರಕ್ಷಕ ದಿನಾಚರಣೆ ಕಾರ್ಯಕ್ರಮವನ್ನು ನಗರದ ಜಿಲ್ಲಾ ಸಮಾದೆಷ್ಟರ ಕಚೇರಿ ಆವರಣದಲ್ಲಿ ನಡೆಸಲಾಯಿತು.
ಶ್ರೀ ರಾಜೀವ್ ಎಂ ಕೆ ಎಸ್ ಪಿ ಎಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ಜಿಲ್ಲಾ ಸಮಾದೇಷ್ಟರು ಗೃಹರಕ್ಷಕ ದಳ ದಾವಣಗೆರೆ ಜಿಲ್ಲೆ ಇವರ ಅಧ್ಯಕ್ಷತೆಯಲ್ಲಿ ಶ್ರೀ ಸಿ.ಬಿ. ರಿಷ್ಯಂತ್,ಪೊಲೀಸ್ ಅಧೀಕ್ಷಕರು ದಾವಣಗೆರೆ ಜಿಲ್ಲೆ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಸಮಾದೇಷ್ಟರು ಶ್ರೀ ಮಹಾಲಿಂಗಪ್ಪ, ಶ್ರೀಮತಿ ಸರಸ್ವತಿ ಕೆ ಜಿಲ್ಲಾ ಸ್ಟಾಪ್ ಆಫೀಸರ್, ಶ್ರೀ ಅಮರೇಶ್ ಕೆ ಎಸ್.ಘಟಕಾಧಿಕಾರಿ ಗಳು ದಾವಣಗೆರೆ ಜಿಲ್ಲೆ, ಮಾಜಿ ಜಿಲ್ಲಾ ಸ್ಟಾಪ್ ಅಧಿಕಾರಿ ಶ್ರೀ ರಂಗಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕಿನ ಗೃಹರಕ್ಷಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.