ಹೊನ್ನಾಳಿ : ಜೋಳದಾಳ್‌ನಲ್ಲಿ ನಕಲಿ ಬಂಗಾರದ ನಾಣ್ಯ ನೀಡಿದ ವ್ಯಕ್ತಿ ಬಂಧನ

ಹೊನ್ನಾಳಿ : ನಕಲಿ ಬಂಗಾರದ ನಾಣ್ಯ ನೀಡಿ ಹಣ ಪಡೆಯುತ್ತಿದ್ದ ವ್ಯಕ್ತಿಯೊಬ್ಬನನ್ನು ಹೊನ್ನಾಳಿ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ.
ಚನ್ನಗಿರಿ ತಾಲೂಕಿನ ಜೋಳದಾಳು ಗ್ರಾಮದ ಎನ್.ರಾಜು (33) ಬಂಧಿತ ವ್ಯಕ್ತಿಘಿ. ಜ.4ರಂದು ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಂಗನಪಾಳಿ ಗ್ರಾಮದ ಆರ್.ರಮೇಶ್ ಎಂಬಾತ ಹೊನ್ನಾಳಿ ಠಾಣೆಯಲ್ಲಿ ತಮಗೆ ನಕಲಿ ಬಂಗಾರ ನೀಡಿ ವಂಚಿಸಲು ಮುಂದಾಗಿದ್ದಘಿ. ಈ ಬಗ್ಗೆ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಹೊನ್ನಾಳಿ ಸಿಪಿಐ ಎಚ್.ಎಂ. ಸಿದ್ದೇಗೌಡ ನೇತತ್ವದ ತಂಡ ಚನ್ನಗಿರಿ ತಾಲೂಕಿನ ಜೋಳದಾಳು ಗ್ರಾಮಕ್ಕೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದಾಗ ಬಂಧಿತ ರಾಜು ಹಾಗೂ ಈತನ ಸಂಬಂಧಿಕರಾದ ಚೌಡಪ್ಪ, ಚೇತನ, ಅಭಿ ಸೇರಿಕೊಂಡು ಮೋಸ ಮಾಡುವ ಉದ್ದೇಶದಿಂದ ನಕಲಿ ಬಂಗಾರದ ನಾಣ್ಯ ನೀಡಿ ಹಣ ಪಡೆಯುವ ಯೋಜನೆ ರೂಪಿಸಿದ್ದರ ಬಗ್ಗೆ ಬಾಯಿ ಬಿಟ್ಟಿದ್ದಾನೆ. ತನಿಖೆ ಮುಂದುವರಿದಿದೆ.