ಹೂವಿನಹಡಗಲಿ ಮಠದಿಂದ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಬಂದ ನೂತನ ರಥ

IMG-20210828-WA0006

 

ಹರಪನಹಳ್ಳಿ: ಹರಪನಹಳ್ಳಿಯ ಅಯ್ಯಪ್ಪಸ್ವಾಮಿ ದೇವಸ್ಥಾನ ಕ್ಕಾಗಿ ಹೂವಿನಹಡಗಲಿಯ ಶ್ರೀ ಗವಿಸಿದ್ಧೇಶ್ವರ ಮಠದಲ್ಲಿ ನಿರ್ಮಾಣವಾದ ನೂತನ ರಥವನ್ನು ಹರಪನಹಳ್ಳಿಯ ಶ್ರೀ ಕಾಶಿ ಸಂಗಮೇ ಶ್ವರ ಸ್ವಾಮಿಯ ದೇವಸ್ಥಾನದಿಂದ ಮೆರವಣಿಗೆಯೊಂದಿಗೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ತಲುಪಿಸಲಾಯಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಾಶಿ ಮಠದ ಪರಮ ಪೂಜ್ಯರಾದ ಡಾ. ಹಿರಿಶಾಂತವೀರ ಮಹಾಸ್ವಾಮಿಗಳು ಹಾಗೂ ನೀಲಗುಂದದ ಪರಮಪೂಜ್ಯರಾದ ಚನ್ನಬಸವ ಶಿವಯೋಗಿ ಮಹಾಸ್ವಾಮಿಗಳು ವಹಿಸಿದ್ದರು . ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಿರ್ದೇಶಕರಾದ ಆರುಂಡಿ ನಾಗರಾಜ್ ,ಅಕ್ಕನ ಬಳಗದ ಅಧ್ಯಕ್ಷರಾದ ಶಾಂತಮ್ಮ ಸದಸ್ಯರಾದ ಶೋಭಾರಾಣಿ ಶಿಕ್ಷಕಿ , ಡಾ.ಆರುಂಡಿ ಸುವರ್ಣ ನಾಗರಾಜ್ ,ದೇವೇಂದ್ರ ಗೌಡ್ರು ಕೋಡಿ ಬಸವರಾಜ್ ಅಟವಾಳಗಿ ರಾಜಶೇಖರ್ ,ಟಿ. ರಾಜಶೇಖರ್ ,ಗಿರೀಶ್ ,ರುದ್ರಪ್ಪ , ಎ.ಎಸ್. ಐ. ರಾಮಚಂದ್ರ ರವರನ್ನು ಒಳಗೊಂಡಂತೆ ಸಕಲ ಸದ್ಭಕ್ತರು ಹಾಜರಿದ್ದರು .

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!