ಉಚಿತ ಸೌರ ಪಂಪ್‌ಸೆಟ್ ಅಳವಡಿಸಿಕೊಂಡಿರುವ ಫಲಾನುಭವಿಗಳು ಎಷ್ಟು?

ದಾವಣಗೆರೆ : 2014-15ನೇ ಸಾಲಿನಿಂದ ನವೆಂಬರ್ 2019 ರವರೆಗೆ ಒಟ್ಟು 701 ಜನ ರೈತ ಫಲಾನುಭವಿಗಳಿಗೆ ಮೊದಲ ಆದ್ಯತೆ ಮೇರೆಗೆ ಉಚಿತವಾಗಿ 5 ಹೆಚ್.ಪಿ ಸಾಮರ್ಥ್ಯದ ಸೌರ ಪಂಪ್‌ಸೆಟ್‌ಗಳನ್ನು ಒದಗಿಸಲಾಗಿದ್ದು, ಸದರಿ ಯೋಜನೆಯು ಮುಕ್ತಾಯಗೊಂಡಿರುತ್ತದೆ ಎಂದು ವಿಧಾನಸಭೆ ಕಲಾಪದಲ್ಲಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಖೃತಿ ಸಚಿವ ವಿ. ಸುನೀಲ್ ಕುಮಾರ್ ಅವರು ಕೆ.ವಿ. ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಕೆ.ವಿ. ನಾರಾಯಣಸ್ವಾಮಿ ಅವರು ವಾರ್ಷಿಕವಾಗಿ ಎಷ್ಟು ಜನ ರೈತರಿಗೆ ಉಚಿತ ಸೋಲಾರ್ ಪಂಪ್‌ಸೆಟ್ ವಿತರಣೆ ಮಾಡಲಾಗುತ್ತಿದೆ. ಉಚಿತ ಸೋಲಾರ್ ಪಂಪ್‌ಸೆಟ್ ಫಲಾನುಭವಿಗಳ ಆಯ್ಕೆ ಮಾಡುವ ಪ್ರಕ್ರಿಯೆ ಯಾವುವು? ಹಾಗೂ (ಯೋಜನೆ ಜಾರಿಗೆ ಬಂದಾಗಿನಿAದ ಇಲ್ಲಿಯವರೆಗಿನ ಜಿಲ್ಲಾವಾರು ಮಾಹಿತಿ ನೀಡುವಂತೆ ಕೇಳಿದ್ದು ಅದಕ್ಕೆ ವಿ. ಸುನೀಲ್ ಕುಮಾರ್ ಉತ್ತರಿಸಿದ್ದಾರೆ. 2014-15ನೇ ಸಾಲಿನಿಂದ ನವೆಂಬರ್ 2019 ರವರೆಗೆ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ 487, ಪರಿಶಿಷ್ಟ ಪಂಗಡಕ್ಕೆ 214 ಒಟ್ಟು 701 ಫಲಾನುಭವಿಗಳಿಗೆ ಉಚಿತವಾಗಿ 5 ಹೆಚ್.ಪಿ ಸಾಮರ್ಥ್ಯದ ಸೌರ ಪಂಪ್‌ಸೆಟ್‌ಗಳನ್ನು ಒದಗಿಸಲಾಗಿದೆ.
ಉಚಿತವಾಗಿ ಸೌರ ಪಂಪ್‌ಸೆಟ್ ಅಳವಡಿಸಿಕೊಂಡಿರುವ ಫಲಾನುಭವಿಗಳ ಜಿಲ್ಲಾವಾರು ವಿವರ :
ಬೆಳಗಾವಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಒಟ್ಟು 79, ಬಾಗಲಕೋಟೆ 50, ಬಳ್ಳಾರಿ 14, ಬೆಂಗಳೂರು ಗ್ರಾಮಾಂತರ 9, ಬೀದರ್ 17, ಚಾಮರಾಜನಗರ 38, ಚಿಕ್ಕಬಳ್ಳಾಪುರ 18, ಚಿಕ್ಕಮಂಗಳೂರು 9, ಚಿತ್ರದುರ್ಗ 35, ದಾವಣಗೆರೆ 62, ಧಾರವಾಡ 6, ಗದಗ 25, ಹಾಸನ 7, ಹಾವೇರಿ 24, ಕಲ್ಬುರ್ಗಿ 56, ಕೋಲಾರ 3, ಕೊಪ್ಪಳ 21, ಮಂಡ್ಯ 33, ಮೈಸೂರು 23, ರಾಯಚೂರು 19, ರಾಮನಗರ 8, ಶಿವಮೊಗ್ಗ 10, ತುಮಕೂರು 38, ವಿಜಯಪುರ 96, ಯಾದಗಿರಿ 01 ರಷ್ಟು ಫಲಾನುಭವಿಗಳು ಉಚಿತವಾಗಿ ಸೌರ ಪಂಪ್‌ಸೆಟ್ ಅಳವಡಿಸಿಕೊಂಡಿದ್ದಾರೆ.