ರೈತರಿಗೆ ಉಚಿತ ವಿದ್ಯುತ್ ಒದಗಿಸಲು ಸರ್ಕಾರ ಮಾಡುತ್ತಿರುವ ವೆಚ್ಚವೆಷ್ಟು?

ದಾವಣಗೆರೆ : ಸರ್ಕಾರ ಪ್ರತಿವರ್ಷ ರಾಜ್ಯದ ರೈತರ 10 ಹೆಚ್.ಪಿ ಸಾಮರ್ಥ್ಯದವರೆಗಿನ ಕೃಷಿ ನೀರಾವರಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸರಬರಾಜು ಮಾಡಲು ಸರ್ಕಾರದಿಂದ ಕೋಟ್ಯಾಂತರ ರೂಗಳನ್ನು ಬಿಡುಗಡೆ ಮಾಡುತ್ತಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಖೃತಿ ಸಚಿವ ವಿ. ಸುನೀಲ್ ಕುಮಾರ್ ವಿಧಾನಸಭೆ ಕಲಾಪದಲ್ಲಿ ಕೆ.ವಿ. ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಅಂದರೆ ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಸೆಸ್ಕ್, ಹುಕ್ಕೇರಿ ವಿದ್ಯುತ್ ಕಂಪನಿಗಳಿಗೆ 2017-18ರಲ್ಲಿ 8449.89 ಕೋಟಿ, 2018-19ರಲ್ಲಿ 8856.66 ಕೋಟಿ, 2019-20ರಲ್ಲಿ 10743.46 ಕೋಟಿ ಹಾಗೂ 2020-21ರಲ್ಲಿ 10676.69 ಕೋಟಿ ಹಾಗೂ 2021-22(ಫೆಬ್ರವರಿ 22ರ) ಅಂತ್ಯಕ್ಕೆ 9879.95 ಕೋಟಿ ರೂಗಳನ್ನು ವೆಚ್ಚ ಮಾಡಿದೆ.

ಬೆಸ್ಕಾಂಗೆ 2017-18ರಲ್ಲಿ 1785.20, 2018-19 ರಲ್ಲಿ 2182.58, 2019-20ರಲ್ಲಿ 2434.57, 2020-21ರಲ್ಲಿ 2554.26, 2021-22 (ಫೆಬ್ರವರಿ 22ರ ಅಂತ್ಯಕ್ಕೆ) 2379.15 ಕೋಟಿ, ಇನ್ನೂ ಮೆಸ್ಕಾಂಗೆ 2017-18ರಲ್ಲಿ 615.40,, 2018-19 ರಲ್ಲಿ 605.97, 2019-20ರಲ್ಲಿ 868.38, 2020-21ರಲ್ಲಿ 852.54, 2021-22 (ಫೆಬ್ರವರಿ 22ರ ಅಂತ್ಯಕ್ಕೆ) 883.93 ಕೋಟಿ ರೂ. ಹೆಸ್ಕಾಂಗೆ 2017-18ರಲ್ಲಿ 3168.75, 2018-19 ರಲ್ಲಿ 2887.68, 2019-20ರಲ್ಲಿ 4053.96, 2020-21ರಲ್ಲಿ 3982.41, 2021-22 (ಫೆಬ್ರವರಿ 22ರ ಅಂತ್ಯಕ್ಕೆ) 3461.47 ಕೋಟಿ ರೂ. ಜೆಸ್ಕಾಂಗೆ 2017-18ರಲ್ಲಿ 1663.88, 2018-19 ರಲ್ಲಿ 1602.40, 2019-20ರಲ್ಲಿ 1902.37, 2020-21ರಲ್ಲಿ 1709.97, 2021-22 (ಫೆಬ್ರವರಿ 22ರ ಅಂತ್ಯಕ್ಕೆ) 1575.80 ಕೋಟಿ ರೂ ಹಾಗೂ ಸೆಸ್ಕ್ಗೆ 2017-18ರಲ್ಲಿ 1121.53, 2018-19 ರಲ್ಲಿ 1361.59, 2019-20ರಲ್ಲಿ 1364.07, 2020-21ರಲ್ಲಿ 1479.79, 2021-22 (ಫೆಬ್ರವರಿ 22ರ ಅಂತ್ಯಕ್ಕೆ) 1493.02 ಕೋಟಿ ಮತ್ತು ಹುಕ್ಕೇರಿ 2017-18ರಲ್ಲಿ 95.13, 2018-19 ರಲ್ಲಿ 216.44, 2019-20ರಲ್ಲಿ 120.11, 2020-21ರಲ್ಲಿ 97.72, 2021-22 (ಫೆಬ್ರವರಿ 22ರ ಅಂತ್ಯಕ್ಕೆ) 86.58 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ.

 

 

Leave a Reply

Your email address will not be published. Required fields are marked *

error: Content is protected !!